ADVERTISEMENT

ಬಟ್ಟೆಯ ಬ್ಯಾಗ್‌ ಬಳಸೋಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 18:18 IST
Last Updated 3 ಅಕ್ಟೋಬರ್ 2019, 18:18 IST

ಗಾಂಧೀಜಿಯವರ 150ನೇ ಜನ್ಮದಿನದ ಸಂದರ್ಭದಲ್ಲಿ, ಒಂದೇ ಬಾರಿ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್ ನಿಷೇಧಕ್ಕೆ ಕರೆ ಕೊಟ್ಟಿರುವ ಪ್ರಧಾನಿ ಅಭಿನಂದನಾರ್ಹರು.

ಪ್ಲಾಸ್ಟಿಕ್, ಪರಿಸರಕ್ಕೆ ಮಾರಕ ಎಂದು ತಿಳಿದಿದ್ದರೂ ಅತೀ ಹೆಚ್ಚಿನ ಪ್ರಮಾಣದಲ್ಲಿ ನಾವು ಬಳಸುವುದರಿಂದ ಅದು ಪ್ರಾಣಿ ಪಕ್ಷಿಗಳ ಸಾವಿಗೆ ಕಾರಣವಾಗುತ್ತಿದೆ. ಆದ್ದರಿಂದ ಸಂಪೂರ್ಣವಾಗಿ ಅದನ್ನು ನಿಯಂತ್ರಿಸಬೇಕು.

ದಶಕದ ಹಿಂದೆ ನಾವು ಅಂಗಡಿ, ಸಂತೆಗೆ ಹೋಗುವಾಗ ಬಟ್ಟೆಯ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಈಗ ಎಲ್ಲೆಂದರಲ್ಲಿ ಸುಲಭವಾಗಿ ಪ್ಲಾಸ್ಟಿಕ್‌ ದೊರೆಯುವುದರಿಂದ ಆ ಪದ್ಧತಿ ಮರೆಯಾಗಿದೆ. ಮತ್ತೆ ಹಿಂದಿನ ರೂಢಿಯನ್ನೇ ಅನುಸರಿಸಿ, ಪ್ಲಾಸ್ಟಿಕ್‌ ಬಳಕೆಯನ್ನು ತಗ್ಗಿಸಲು ಇದು ಸಕಾಲ.

ADVERTISEMENT

– ಸುದರ್ಶನ್ ಎಚ್.ಎನ್,ಹೆತ್ತೂರು, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.