ADVERTISEMENT

ಹಂತಹಂತವಾಗಿ ಆಗಲಿ ಕಾಲೇಜು ಆರಂಭ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST

ಕಾಲೇಜು ಆರಂಭಕ್ಕೆ ಅವಸರ ಸಲ್ಲದು ಎಂಬ ನನ್ನ ಪತ್ರಕ್ಕೆ (ವಾ.ವಾ., ಅ. 31) ಅಶೋಕ ಓಜಿನಹಳ್ಳಿ ಅವರು ಪ್ರತಿಕ್ರಿಯಿಸಿ (ವಾ.ವಾ., ನ. 2), ಪ್ರವಾಸ, ಯಾತ್ರೆ, ಚುನಾವಣಾ ಪ್ರಚಾರಗಳಲ್ಲಿ ಮಾಸ್ಕ್ ಇಲ್ಲದೆ, ಅಂತರ ಕಾಯ್ದುಕೊಳ್ಳದೆ, ಕೊರೊನಾ ಭಯ ಇಲ್ಲದೆ ತಂಡೋಪತಂಡವಾಗಿ ಯುವಜನ ಭಾಗವಹಿಸುತ್ತಿರುವಾಗ ಕಾಲೇಜುಗಳಿಗೆ ಬರಲು ಮಾತ್ರ ಭೀತಿ ಏಕೆ ಎಂದು ಪ್ರಶ್ನಿಸಿದ್ದಾರೆ.

ಅವರು ಹೇಳಿದಂತೆ, ಈಗ ಕೊರೊನಾ ಭೀತಿ ಇಲ್ಲದೇ ಜನ ಬೀದಿಗಿಳಿಯುತ್ತಿರುವುದು ನಿಜ. ಆದರೆ ಇವೆಲ್ಲವೂ ಕಾನೂನು ರೀತಿ ಅಪರಾಧಗಳು. ಇವುಗಳ ಪರಿಣಾಮವನ್ನು ನಾವು ಮುಂದೆ ಅನುಭವಿಸಲಿದ್ದೇವೆ. ಕಾಲೇಜುಗಳ ಏಕಾಏಕಿ ಆರಂಭದಿಂದ, ಈಗ ಅಪರಾಧವಾಗಿರುವುದು ಕಾನೂನುಬದ್ಧವಾಗುತ್ತದೆ. ಕೊರೊನಾ ಎರಡನೇ ಅಲೆ ಹಬ್ಬುವಿಕೆ ತಪ್ಪಿಸಲು ಒಮ್ಮೆಲೇ ಕಾಲೇಜುಗಳ ಪೂರ್ಣ ಪ್ರಮಾಣದ ಆರಂಭವನ್ನಾದರೂ ತಪ್ಪಿಸಬೇಕು. ಕೆಲವು ದಿನ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದು, ಎರಡು ಸೆಮಿಸ್ಟರ್‌ಗಳ ಶೇ 50ರಷ್ಟು ಪಠ್ಯ ಸೇರಿಸಿ ಒಂದು ವಾರ್ಷಿಕ ಪರೀಕ್ಷೆಯಂತಹ ಬದಲಾವಣೆಗಳನ್ನು ತರಬಹುದು.

- ಕೆ.ಶಿವಸ್ವಾಮಿ,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.