ADVERTISEMENT

ಕಾಲೇಜು ಪುನರಾರಂಭ: ಅವಸರದ ತೀರ್ಮಾನವಲ್ಲ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 19:30 IST
Last Updated 1 ನವೆಂಬರ್ 2020, 19:30 IST

‘ಕಾಲೇಜು ಆರಂಭಕ್ಕೆ ಅವಸರವೇಕೆ?’ ಎಂದು ಕೆ.ಶಿವಸ್ವಾಮಿ ಅವರು ಕೇಳಿರುವುದನ್ನು ಓದಿ (ವಾ.ವಾ., ಅ. 31) ಅಚ್ಚರಿಯಾಯಿತು. ಅವರು ತಿಳಿದುಕೊಂಡಿರುವಂತೆ, ಕೊರೊನಾ ಹರಡುವಿಕೆಯನ್ನು ತಡೆಯಲು ಯುವಜನರು ಮನೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿತಿಲ್ಲ. ಹಬ್ಬಗಳ ಈ ಸರಣಿಯಲ್ಲಿ ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್‌ಗಳು, ದೇವಸ್ಥಾನಗಳು, ಹೋಟೆಲ್‌ಗಳು, ಬಸ್, ರೈಲು ಮುಂತಾದ ಸಾರ್ವಜನಿಕ ಸ್ಥಳಗಳು ಜನರಿಂದ ತುಂಬಿ ತುಳುಕುತ್ತಿವೆ. ಮಾಸ್ಕೂ ಇಲ್ಲ, ಅಂತರವೂ ಇಲ್ಲ. ಉಪ ಚುನಾವಣೆಯಲ್ಲಿ ಸ್ಟಾರ್ ನಟರ ಪ್ರಚಾರದ ವೇಳೆ ಯುವಜನರು ತಂಡೋಪತಂಡವಾಗಿ ಭಾಗವಹಿಸಿದ್ದುದು ಜಗಜ್ಜಾಹೀರಾಗಿದೆ. ಅಲ್ಲೆಲ್ಲೂ ಇಲ್ಲದ ಕೊರೊನಾ ಭೀತಿ ಕಾಲೇಜುಗಳಲ್ಲಿ ಮಾತ್ರ ಏಕೆ?

ತಜ್ಞರ ಸಮಿತಿಯ ಶಿಫಾರಸಿನ ನಂತರವೇ ಸರ್ಕಾರವು ಕಾಲೇಜುಗಳ ಆರಂಭಕ್ಕೆ ಸಿದ್ಧವಾಗಿರುವುದು. ಇದು ಅವಸರದ ನಿರ್ಧಾರವೇನಲ್ಲ. ಹೀಗಾಗಿ, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಸಿದ್ಧವಾಗಲಿ.⇒

- ಅಶೋಕ ಓಜಿನಹಳ್ಳಿ, ‌ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.