ADVERTISEMENT

ಕ್ವಾರಂಟೈನ್‌ ಮುದ್ರೆಯಲ್ಲೂ ಕಲಬೆರಕೆ?

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 19:30 IST
Last Updated 29 ಜೂನ್ 2020, 19:30 IST

ಮನೆಯಲ್ಲಿ ಕ್ವಾರಂಟೈನ್ ಆಗುವವರಿಗೆ ಹಾಕಲಾಗುತ್ತಿರುವ ಸ್ಟ್ಯಾಂಪ್ ಮುದ್ರೆ ಕಡಿಮೆ ಖರ್ಚಿನಲ್ಲಿ ಆಗುವಂಥದ್ದು. ಹಾಗಿದ್ದೂ ಅದಕ್ಕೆ ಉಪಯೋಗಿಸುವ ಶಾಯಿ ಗುಣಮಟ್ಟದ್ದಲ್ಲ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ನಾವೇ ಸ್ವತಃ ಸ್ಟ್ಯಾಂಪ್ ಹಾಕಿಸಿಕೊಂಡಿದ್ದು, ಕೇವಲ 5-6 ದಿನಗಳಿಗೇ ಅದು ಮಾಸಲಾಗಿ, ಒಂದು ವಾರದ ವೇಳೆಗೆ ಗುರುತೇ ಇಲ್ಲದಂತೆ ಅಳಿಸಿಹೋಯಿತು. ವೋಟ್ ಮಾಡಿದಾಗ ಹಾಕುವ ಶಾಯಿಯ ಗುಣಮಟ್ಟ ಸಹ ಅದಕ್ಕಿರಲಿಲ್ಲ. ಕಡಿಮೆ ಖರ್ಚಿನಲ್ಲಿ ಆಗುವ ಇಂತಹ ಯೋಜನೆಯೇ ಹೀಗಾದರೆ, ಇನ್ನು ಟ್ಯಾಗು, ಸೈರನ್, ಕ್ವಾರಂಟೈನ್‌ನಲ್ಲಿ ಇರುವವರ ಚಲನವಲನದ ದಾಖಲೆ ಇವೆಲ್ಲಾ ಎಷ್ಟರ ಮಟ್ಟಿಗೆ ಯಶಸ್ವಿಯಾಗು ತ್ತವೋ, ಇವುಗಳ ಹೆಸರಿನಲ್ಲಿ ಎಷ್ಟು ಹಣ ಯಾರ‍್ಯಾರ ಜೇಬು ಸೇರುತ್ತದೆಯೋ ದೇವರೇ ಬಲ್ಲ.

-ಅರ್ಚನಾ ಶಂಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT