ADVERTISEMENT

ವಾಚಕರ ವಾಣಿ: ಮತ್ತೆ ಪ್ರಕೃತಿಯ ಶೋಷಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 19:30 IST
Last Updated 24 ಸೆಪ್ಟೆಂಬರ್ 2020, 19:30 IST

ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಸಿ ತಾತ್ಕಾಲಿಕ ಪಾರದರ್ಶಕ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಪ್ರಕೃತಿಗೆ‌ ಮಾಡುವ ದೊಡ್ಡ ಗಾಯ. ಇಷ್ಟು ದಿನ ಪ್ರಕೃತಿ‌ಗೆ ನಾವು ಮಾಡಿದ್ದ ಅನ್ಯಾಯದಿಂದ ಈಗ ಈ ಸ್ಥಿತಿ ಅನುಭವಿಸುತ್ತಿದ್ದೇವೆ. ಈಗ ಮತ್ತೊಂದು ರೀತಿಯ ಗಾಯವನ್ನು ಮಾಡಲು ಹೊರಟಿರುವುದು ಆಘಾತಕಾರಿ ಬೆಳವಣಿಗೆ.

ಪ್ಲಾಸ್ಟಿಕ್ ಹಾಳೆಗಳು ಸೋಂಕಿನ‌ ಹನಿಗಳು‌ ತಾಕದಂತೆ ರಕ್ಷಣೆ ನೀಡುತ್ತವೆ ಎನ್ನಲಾಗುತ್ತದೆ. ಆದರೆ ಬಟ್ಟೆಯ ಮುಖಗವಸು ಸೋಂಕು ಹರಡುವಿಕೆಯನ್ನು ತಡೆಯಬಹುದಾದರೆ, ಬಟ್ಟೆಯ ಪರದೆಗಳನ್ನೇ ಬಳಸಬಹುದಲ್ಲವೇ? ಹಾಗೆಯೇ ನಾವು ವೈಯಕ್ತಿಕ‌ ಅಂತರವನ್ನು ಕಾಪಾಡಿಕೊಂಡರೆ ಅನವಶ್ಯಕವಾದ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಬಹುದು ಮತ್ತು ತೆರಿಗೆ ಪಾವತಿದಾರರ ಹಣ ವೃಥಾ ವೆಚ್ಚವಾಗದಂತೆ ತಡೆಯಬಹುದು. ಆಸ್ಪತ್ರೆಗಳಲ್ಲಿ ಈಗಾಗಲೇ ರೋಗಿಗಳ ಚಿಕಿತ್ಸೆಗೆ, ಕೊರೊನಾ ವಾರಿಯರ್ಸ್ ರಕ್ಷಣೆಗೆಂದು ಟನ್‌ಗಟ್ಟಲೆ ಪ್ಲಾಸ್ಟಿಕ್ ಬಳಕೆ
ಯಾಗುತ್ತಿದೆ. ಅದನ್ನು ವಿಲೇ ಮಾಡುವುದೇ ದೊಡ್ಡ ಸವಾಲಾಗಿರುವಾಗ ಮತ್ತೆ ಅನವಶ್ಯಕವಾಗಿ ಪ್ಲಾಸ್ಟಿಕ್ ಬಳಕೆಗೆ ಮುಂದಾಗಿರುವುದು ದುರಂತ.ಪರಿಣತರು ಮತ್ತು ಸಂಬಂಧಪಟ್ಟವರು ಈ ಬಗ್ಗೆ ಯೋಚಿಸಿ, ಪ್ರಕೃತಿಯ ಮೇಲಿನ ಆಕ್ರಮಣವನ್ನು ತಡೆಯಬೇಕು.

–ಎಸ್.ರವಿ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.