ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಹರಿದಾಡುತ್ತಿವೆ. ಅದರೊಂದಿಗೆ, ಈ ವೈರಸ್ ತಡೆಗಟ್ಟಲು ಹಲವಾರು ಔಷಧಿ, ಮನೆ ಮದ್ದುಗಳನ್ನೂ ಕೆಲವರು ಹೆಸರಿಸುತ್ತಿದ್ದು, ಇವು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುತ್ತಿವೆ. ನಮ್ಮ ದೇಶವು ಗಿಡಮೂಲಿಕಾ ಔಷಧಿಗಳ ಭಂಡಾರ. ಪ್ರತಿಯೊಂದು ಗಿಡಬಳ್ಳಿಯೂ ತನ್ನದೇ ಆದ ವಿಶಿಷ್ಟ ಔಷಧೀಯ ಗುಣವನ್ನು ಹೊಂದಿದೆ. ಆದರೆ ವಾಟ್ಸ್‌ಆ್ಯಪ್ ವೈದ್ಯರು ಸೂಚಿಸುವ ಈ ಔಷಧಿಗಳನ್ನು ಒರೆಗೆ ಹಚ್ಚದೆ ನಂಬುವುದಾದರೂ ಹೇಗೆ?
–ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.