ADVERTISEMENT

ವೈದ್ಯಪಡೆಯ ಶ್ಲಾಘನೀಯ ಕಾರ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಮೇ 2021, 19:30 IST
Last Updated 17 ಮೇ 2021, 19:30 IST

‘ಆಸ್ಪತ್ರೆಗಳ ಭಾರ ತಗ್ಗಿಸಲು ಬಿಎಂಸಿ- 92 ವೈದ್ಯಪಡೆಯ ಹೊಸ ಮಾರ್ಗ’ ಎಂಬ ಸುದ್ದಿ (ಪ್ರ.ವಾ., ಮೇ 15) ಓದಿ ಸಂತಸವಾಯಿತು. ಕೋವಿಡ್‌ ಸಾಂಕ್ರಾಮಿಕದ ಈ ದುರಿತ ಕಾಲದಲ್ಲಿ ಆಸ್ಪತ್ರೆ, ಹಾಸಿಗೆ, ಆಮ್ಲಜನಕ, ಲಸಿಕೆ ವಿಚಾರವಾಗಿ ಸರ್ಕಾರವೇ ಗೊಂದಲದಲ್ಲಿರುವಾಗ, ಬೆಂಗಳೂರು ವೈದ್ಯಕೀಯ ಕಾಲೇಜಿನ (ಬಿಎಂಸಿ) 1992ರ ಬ್ಯಾಚ್‌ನ ಪದವೀಧರರ ಗುಂಪು ಕೊರೊನಾ ಸೋಂಕಿತರಿಗೆ ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ.

ಹಾಗೆಯೇ ದೇಶ ವಿದೇಶಗಳಲ್ಲಿರುವ ಈ ತಂಡದ ವೈದ್ಯರು ಈ ಕಾರ್ಯಕ್ಕೆ ಕೈ ಜೋಡಿಸಿ, ಈ ಸಂಬಂಧ ದೇಣಿಗೆಯನ್ನು ಸಂಗ್ರಹಿಸಿ ಅದನ್ನು ಕೊರೊನಾ ಸೋಂಕಿತರ ಸೇವೆಗೆ ಸದ್ಬಳಕೆ ಮಾಡಿಕೊಂಡಿರುವುದು, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹಾಯವಾಣಿಗಳನ್ನು ತೆರೆದು, ಇಂತಹ ಸಂಕಷ್ಟದ ಸಮಯದಲ್ಲಿ ಜನತೆಗೆ ನೆರವಾಗುತ್ತಿರುವುದು ನೊಂದವರಲ್ಲಿ ಹೊಸ ಭರವಸೆ ಮೂಡಿಸುತ್ತಿದೆ.

ಎಲ್ಲದಕ್ಕೂ ಸರ್ಕಾರವನ್ನೇ ಕಾಯದೆ ಸ್ವಯಂ ಸೇವಕರು ಸ್ವ ಇಚ್ಛೆಯಿಂದ ಮುಂದೆ ಬಂದು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದುದು ಇಂದಿನ ಅನಿವಾರ್ಯಗಳಲ್ಲಿ ಒಂದು.

ADVERTISEMENT

- ರಾಘವೇಂದ್ರ ಅಫುರಾ,ಅಗತಗೌಡನಹಳ್ಳಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.