ADVERTISEMENT

ಕೋವಿಡ್ ಪರೀಕ್ಷೆ: ಹಿಂಜರಿಕೆ ಸಲ್ಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 20:30 IST
Last Updated 4 ಡಿಸೆಂಬರ್ 2020, 20:30 IST

ಕೋವಿಡ್ ಲಸಿಕೆ ಕುರಿತ ಲೇಖನದಲ್ಲಿ (ಪ್ರ.ವಾ., ಡಿ. 4) ಪ್ರೊ. ಶ್ರೀಲತಾ ರಾವ್‌ ಶೇಷಾದ್ರಿ ಅವರು, ಗುಂಪು ನಿರೋಧಕತೆ ಸಾಧಿಸುವುದು ಅಷ್ಟು ಸುಲಭವಲ್ಲ ಎಂದಿರುವುದು ಸರಿಯಾಗಿದೆ. ಆದರೆ ಕೋವಿಡ್‌ನ ಭಯವನ್ನು ಲಸಿಕೆಯಿಂದ ಮಾತ್ರವಲ್ಲದೆ ಆತ್ಮಸ್ಥೈರ್ಯ, ಸಕಾರಾತ್ಮಕ ಮನೋಭಾವ, ರೋಗನಿರೋಧಕ ಶಕ್ತಿಯಿಂದಲೂ ಎದುರಿಸಬೇಕಿದೆ. ಎಷ್ಟೋ ಜನ ತಮ್ಮಲ್ಲಿ ರೋಗಲಕ್ಷಣ ಕಂಡರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಲೂ ಕೋವಿಡ್ ಪ್ರಕರಣಗಳು ಇಳಿಕೆಯಾಗಿರುವಂತೆ ಕಾಣುತ್ತಿರಬಹುದು!

ಕೋವಿಡ್‌ನ ಮತ್ತೊಂದು ಅಲೆಯೇನಾದರೂ ಎದ್ದರೆ, ಭಾರತದಂತಹ ಬೃಹತ್ ಜನಸಂಖ್ಯೆಯ ರಾಷ್ಟ್ರದಲ್ಲಿ ಊಹಿಸಲಾಗದಂತಹ ಸನ್ನಿವೇಶವನ್ನು ಎದುರಿಸಬೇಕಾದೀತು. ಇರುವುದೊಂದೇ ಜೀವನ, ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯೂ ಹೌದು.

ಕೆಂಪಯ್ಯಾ ಕರಿಕಟ್ಟಿ, ಜಾಗನೂರ, ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.