ADVERTISEMENT

ವಾಚಕರ ವಾಣಿ: ಲಸಿಕೆ ಪ್ರಮಾಣಪತ್ರ; ದೋಷರಹಿತವಾಗಿರಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 19:30 IST
Last Updated 9 ಜೂನ್ 2021, 19:30 IST

ಕೋವಿಡ್‌ ಲಸಿಕಾ ಫಲಾನುಭವಿಗಳಿಗೆ ನೀಡುತ್ತಿರುವ ಪ್ರಮಾಣಪತ್ರದಲ್ಲಿ ದೋಷಪೂರಿತ ಮಾಹಿತಿ ಕೊಡಲಾಗುತ್ತಿದೆ. ಲಸಿಕೆ ಪಡೆದ ಮೇಲೆ ಫಲಾನುಭವಿಗಳ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶ ಬರುತ್ತದೆ. ಅದರಲ್ಲಿನ ಲಿಂಕ್ ಮೇಲೆ ಒತ್ತಿದರೆ ಪ್ರಮಾಣಪತ್ರ ಲಭ್ಯವಾಗುತ್ತದೆ. ಆದರೆ, ಪ್ರಮಾಣಪತ್ರದಲ್ಲಿ ಲಸಿಕೆ ಪಡೆದವರ ಹೆಸರು, ವಯಸ್ಸು, ಲಿಂಗ ಹೀಗೆ ಎಲ್ಲವನ್ನೂ ತಪ್ಪಾಗಿ ನಮೂದಿಸಲಾಗುತ್ತಿದೆ. ವಿದೇಶ ಪ್ರಯಾಣ ಮಾಡುವವರಿಗೆ ವಿಮಾನ ನಿಲ್ದಾಣದಲ್ಲಿ ಇಂಥ ದೋಷಪೂರಿತ ಪ್ರಮಾಣಪತ್ರಗಳಿಗೆ ಮಾನ್ಯತೆ ದೊರೆಯುವುದಿಲ್ಲ.

ಆದ್ದರಿಂದ ಫಲಾನುಭವಿಗಳ ಮಾಹಿತಿಯನ್ನು ನಿಖರವಾಗಿ ಕಂಪ್ಯೂಟರೀಕರಣ ಮಾಡಿ, ಎಲ್ಲೆಡೆ ಮಾನ್ಯತೆ ದೊರೆಯುವಂತಹ ಪ್ರಮಾಣಪತ್ರ ಲಭ್ಯವಾಗುವಂತೆ ಮಾಡಬೇಕು. ಇದಕ್ಕಾಗಿ ಡೇಟಾ ಎಂಟ್ರಿ ಸಿಬ್ಬಂದಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕು.

–ಡಾ. ಟಿ.ಪಿ.ಗಿರಡ್ಡಿ, ಜಮಖಂಡಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.