ADVERTISEMENT

ಪಟಾಕಿ ಸಿಡಿಸಲು ನೆಪ ಹುಡುಕುವುದು ಬೇಡ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 18:17 IST
Last Updated 30 ಅಕ್ಟೋಬರ್ 2019, 18:17 IST

ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ಪುರಾತನ ಹಿಂದೂ ಸಂಪ್ರದಾಯದ ಭಾಗ ಎನ್ನುವವರು ಮುಖ್ಯವಾಗಿ ಕೆಲವು ಸಂಗತಿಗಳನ್ನು ಗಮನಿಸಬೇಕು. ದೇಶದಲ್ಲಿ ಜನಸಾಮಾನ್ಯರು ಪಟಾಕಿ ಸಿಡಿಸುವುದು ಶುರುವಾಗಿದ್ದು ಬ್ರಿಟಿಷರ ಕಾಲದಲ್ಲಿ. ಅಂದರೆ, ಸುಮಾರು 200 ವರ್ಷಗಳ ಹಿಂದೆ. ಅದಕ್ಕೆ ಮೊದಲು ಭಾರತದಲ್ಲಿ ಎಲ್ಲಿಯೂ ಪಟಾಕಿ ತಯಾರಾಗುತ್ತಲೇ ಇರಲಿಲ್ಲ. ಪಟಾಕಿ ತಯಾರಿಕೆಯ ತಂತ್ರಜ್ಞಾನದ ಮೂಲ ಚೀನಾ. ಬ್ರಿಟಿಷರ ಮೂಲಕ ಅದು ಚೀನಾದಿಂದ ಭಾರತಕ್ಕೆ ಬಂತು. ಹಾಗಿರುವಾಗ ಪಟಾಕಿ ಸಿಡಿಸುವುದು ಪುರಾತನ ಹಿಂದೂ ಸಂಪ್ರದಾಯದ ಭಾಗ ಆಗಲು ಹೇಗೆ ಸಾಧ್ಯ?

ಮೊಘಲರ ಕಾಲದಲ್ಲಿ ತೋಪು ಗುಂಡು ತಯಾರಿಸಲು ಸ್ಫೋಟಕ ಬಳಸುತ್ತಿದ್ದದ್ದು ನಿಜ. ಸ್ಫೋಟಕ ರಾಸಾಯನಿಕ ಬಳಸಿ ರಾಕೆಟ್ ತಯಾರಿಸಿದ ಮೊದಲ ಭಾರತೀಯ ಟಿಪ್ಪು ಸುಲ್ತಾನ್‌. ಆದರೂ ಮೊಘಲರಾಗಲೀ ಅಥವಾ ಟಿಪ್ಪು ಸುಲ್ತಾನ್ ಆಗಲೀ ಸಾಮಾನ್ಯ ಜನರ ಕೈಗೆ ಈ ಸ್ಫೋಟಕ ರಾಸಾಯನಿಕಗಳನ್ನು ಕೊಟ್ಟಿರಲಿಲ್ಲ. ಹಾಗಾಗಿ ಟಿಪ್ಪು ಅಥವಾ ಮೊಘಲರ ಕಾಲದಲ್ಲಿಯೂ ಸಾಮಾನ್ಯ ಜನರಿಗೆ ಪಟಾಕಿ ಅಲಭ್ಯವಾಗಿತ್ತು. ಆದರೆ ಈಗ, ಘೋರ
ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ನಿಷೇಧಿಸಿದರೆ ಅದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಕೆಲವು ಧಾರ್ಮಿಕ ಕಟ್ಟರ್‌ವಾದಿಗಳು ಹುಯಿಲು ಎಬ್ಬಿಸುತ್ತಿರುವುದು ಯಾವ ಆಧಾರದಲ್ಲಿ?

ಅನಿಲ್ ಪೂಜಾರಿ,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.