ADVERTISEMENT

ಆಧುನಿಕ ಸೌಲಭ್ಯ ಇರುವೆಡೆ ಕ್ರಿಕೆಟ್‌ ಪಂದ್ಯ ಆಯೋಜಿಸಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 4:42 IST
Last Updated 9 ಜನವರಿ 2020, 4:42 IST
ಆಧುನಿಕ ಉಪಕರಣಗಳು ಲಭ್ಯವಿರುವೆಡೆ ಪಂದ್ಯ ಆಯೋಜಿಸಲಿ. ಇದರಿಂದ, ಕ್ರಿಕೆಟ್‌ಪ್ರೇಮಿಗಳಿಗೆ ಕಿರಿಕಿರಿ ಆಗುವುದು ತಪ್ಪುತ್ತದೆ.
ಆಧುನಿಕ ಉಪಕರಣಗಳು ಲಭ್ಯವಿರುವೆಡೆ ಪಂದ್ಯ ಆಯೋಜಿಸಲಿ. ಇದರಿಂದ, ಕ್ರಿಕೆಟ್‌ಪ್ರೇಮಿಗಳಿಗೆ ಕಿರಿಕಿರಿ ಆಗುವುದು ತಪ್ಪುತ್ತದೆ.    

ಗುವಾಹಟಿಯಲ್ಲಿ ಟ್ವೆಂಟಿ–20 ಕ್ರಿಕೆಟ್ ಪಂದ್ಯಕ್ಕೆ ಮಳೆಯಿಂದ ಅಡ್ಡಿ ಉಂಟಾದ್ದರಿಂದ ಪಿಚ್ ಒಣಗಿಸಲು ಹೇರ್ ಡ್ರೈಯರ್ ಬಳಕೆ ಮಾಡಿದ್ದು ವರದಿಯಾಗಿದೆ (ಪ್ರ.ವಾ., ಜ. 6). ಈ ಕಾಲದಲ್ಲಿ ಪಿಚ್ ಒಣಗಿಸಲು ಆಧುನಿಕ ಯಂತ್ರಗಳಿದ್ದರೂ ಗುವಾಹಟಿಯಲ್ಲಿ ಹೇರ್ ಡ್ರೈಯರ್‌ ಬಳಸಿದ್ದು ಹಾಸ್ಯಾಸ್ಪದವೇ ಸರಿ.

ಕ್ರಿಕೆಟ್ ವಲಯಕ್ಕೆ ಖಂಡಿತ ಹಣದ ಕೊರತೆ ಇರಲಾರದು. ಭಾರತ ಕ್ರಿಕೆಟ್ ಮಂಡಳಿಯು ಇನ್ನು ಮುಂದಾದರೂ ಎಲ್ಲ ಮೂಲ ಸೌಕರ್ಯ, ಆಧುನಿಕ ಉಪಕರಣಗಳು ಲಭ್ಯವಿರುವೆಡೆ ಪಂದ್ಯ ಆಯೋಜಿಸಲಿ. ಇದರಿಂದ, ಕ್ರಿಕೆಟ್‌ಪ್ರೇಮಿಗಳಿಗೆ ಕಿರಿಕಿರಿ ಆಗುವುದು ತಪ್ಪುತ್ತದೆ.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.