ADVERTISEMENT

ರಾಜಕೀಯ ಅಧಿಕಾರಕ್ಕೆ ಬೈಗುಳವೇ ಸಾಧನ!

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:00 IST
Last Updated 29 ಸೆಪ್ಟೆಂಬರ್ 2019, 20:00 IST

ರಾಜಕಾರಣಿಗಳು ತಮ್ಮ ಪಕ್ಷದವರನ್ನು ಇಲ್ಲವೇ ಎದುರು ಪಕ್ಷದವರನ್ನು ಹೀನಾಮಾನವಾಗಿ ಬೈಯ್ಯುತ್ತಿರುವ ವರದಿಗಳು ದಿನಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿವೆ. ಇದಕ್ಕೆ ಆ ಪಕ್ಷ ಈ ಪಕ್ಷವೆಂಬ ಭೇದವಿಲ್ಲ. ಎಲ್ಲರೂ ಬೈಯ್ಯುವುದನ್ನೇ ಒಂದು ಕಾಯಕವನ್ನಾಗಿ ಇಲ್ಲವೇ ವ್ರತವನ್ನಾಗಿ ಮಾಡಿಕೊಂಡಿದ್ದಾರೆಯೋ ಎಂಬಂತೆ ಮಗ್ನರಾಗಿದ್ದಾರೆ. ಇಂತಹ ಸಾಮಾಜಿಕ ವರ್ತನೆಗೆ ಕಾರಣವೇನೆಂಬುದನ್ನು ಮನಃಶಾಸ್ತ್ರದ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿದೆ.

ವ್ಯಕ್ತಿಯು ತನ್ನ ಕೆಲಸಗಳಿಗೆ ಅಡಚಣೆಯುಂಟಾದಾಗ ಇಲ್ಲವೇ ತನ್ನ ಮನದ ಆಸೆ ಆಕಾಂಕ್ಷೆಗಳು ಈಡೇರದಿದ್ದಾಗ ಹತಾಶನಾಗಿ, ಅದಕ್ಕೆ ಕಾರಣರಾದ ವ್ಯಕ್ತಿಗಳನ್ನು ಬೈಯ್ಯುವುದು ಒಂದು ಬಗೆಯಾದರೆ, ಇತರರ ಮೆಚ್ಚುಗೆಯನ್ನು ಗಳಿಸಿ, ಅವರಿಂದ ಲಾಭ ಪಡೆಯುವುದಕ್ಕಾಗಿ ಬೈಯ್ಯುವುದು ಮತ್ತೊಂದು ಬಗೆಯಾಗಿದೆ. ಇಂದು ರಾಜಕೀಯ ಅಧಿಕಾರ ಪಡೆಯುವುದಕ್ಕಾಗಿ ಅಥವಾ ಪಡೆದಿರುವುದನ್ನು ಉಳಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬರ ವ್ಯಕ್ತಿತ್ವವನ್ನು ಅಲ್ಲಗಳೆದು ಮಾತನಾಡಿ ಪಕ್ಷದಲ್ಲಿನ ಮುಖಂಡರ ಕೃಪೆಗೆ ‌ಪಾತ್ರರಾಗಲು ಬೈಗುಳವು ಒಂದು ಸಾಧನವಾಗಿದೆ. ರಾಜಕಾರಣಿಗಳ ಬೈದಾಡುವಿಕೆಯಿಂದ ನೋಡುವವರಿಗೆ ಮನರಂಜನೆ ದೊರೆಯುತ್ತದೆಯೇ ಹೊರತು, ಹಸಿವಿನಿಂದ, ಬಡತನದಿಂದ, ಜಾತಿ ಮತ್ತು ಧರ್ಮದ ಕಾರಣಕ್ಕಾಗಿ ಹಿಂಸೆಗೆ ಗುರಿಯಾಗಿ ಸಾವು ನೋವಿಗೆ ನಿತ್ಯವೂ ಬಲಿಯಾಗುತ್ತಿರುವ ಜನರ ಬದುಕಿಗೆ ಯಾವೊಂದು ಪರಿಹಾರವೂ ದೊರೆಯುವುದಿಲ್ಲ.

–ಸಿ.ಪಿ.ನಾಗರಾಜ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.