ಕೋವಿಡ್ ಕಾರಣದಿಂದ ವಿಧಿಸಿರುವ ಲಾಕ್‌ಡೌನ್ ವಿಸ್ತರಣೆಯಾಗುವಂತೆ ಕಾಣುತ್ತಿದೆ. ಇಂತಹ ಕ್ಲಿಷ್ಟಕರ ವಾತಾವರಣದಲ್ಲಿ ರಂಗಭೂಮಿ, ಚಲನಚಿತ್ರ, ಕಿರುತೆರೆ, ಜಾನಪದ, ಆರ್ಕೆಸ್ಟ್ರಾ, ಮ್ಯಾಜಿಕ್ ಸೇರಿದಂತೆ ವಿವಿಧ ಕಲಾಪ್ರಕಾರಗಳ ಕಲಾವಿದರ ವರಮಾನ ನಿಂತುಹೋಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತೀ ಜಿಲ್ಲೆಗೂ ಸಾಂಸ್ಕೃತಿಕ ಸಾಂತ್ವನ ಕೇಂದ್ರ ಸ್ಥಾಪಿಸಬೇಕು. ಈ ಮೂಲಕ ಕೋವಿಡ್ ತಪಾಸಣೆ, ಲಸಿಕೆ ನೀಡುವಿಕೆ, ಆದ್ಯತೆ ಮೇರೆಗೆ ರೇಷನ್ ವಿತರಣೆಯಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.
– ಆರ್.ವೆಂಕಟರಾಜು,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.