ADVERTISEMENT

ಪಠ್ಯಕ್ರಮ ಬದಲಾಗಬೇಕು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:00 IST
Last Updated 30 ಡಿಸೆಂಬರ್ 2018, 20:00 IST

‘ಔದ್ಯೋಗಿಕ ನಿರುಪಯುಕ್ತತೆ- ಕಾಲೇಜು ಶಿಕ್ಷಣ’ (ಪ್ರ.ವಾ., ಡಿ. 27) ಲೇಖನ ಸಮಯೋಚಿತವಾದುದು. ಕಾಲೇಜುಗಳು ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆ ಮತ್ತು ಹದಗೆಟ್ಟಿರುವ ಇಂದಿನ ಶಿಕ್ಷಣ ವ್ಯವಸ್ಥೆಯ ಯಥಾವತ್ ಚಿತ್ರಣವನ್ನು ಲೇಖಕರು ನೀಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇಕಾಗುವ ಹೊಸ ಹೊಸ ವಿಷಯಗಳ ಅಳವಡಿಕೆಯಲ್ಲಿ ಹಿಂದುಳಿದಿರುವ ವಿಶ್ವವಿದ್ಯಾಲಯಗಳು ಪದವಿಗಳನ್ನು ನಿರುಪಯುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದು. ಹಿಂದೆ ಇದ್ದ ಕೇವಲ ಮೂರು ವಿಶ್ವವಿದ್ಯಾಲಯಗಳು, ಗುಣಮಟ್ಟದ ಶಿಕ್ಷಣ ಮತ್ತು ಪ್ರಾಮಾಣಿಕ ಪರೀಕ್ಷಾ ವ್ಯವಸ್ಥೆ ನೀಡುವಲ್ಲಿ ಸಫಲವಾಗಿದ್ದವು. ಇಂದು ಹತ್ತಾರು ವಿಶ್ವವಿದ್ಯಾಲಯಗಳು ಉತ್ತೀರ್ಣತೆಯ ಪ್ರಮಾಣವನ್ನು ಹೆಚ್ಚಿಸಲು ಏನೆಲ್ಲಾ ಮಾಡುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ನಮ್ಮಲ್ಲೂ ಕ್ರೀಯಾಶೀಲ ಪಠ್ಯಕ್ರಮ ಜಾರಿಗೆ ಬರಬೇಕು. ಅದನ್ನು ಅನುಸರಿಸಿ ಬೋಧಕ ಸಿಬ್ಬಂದಿಯು ವಿದ್ಯಾರ್ಥಿಗಳನ್ನು ಈಗಿನ ಯುಗಕ್ಕೆ ಹೊಂದುವಂತೆ ತಯಾರು ಮಾಡಬೇಕು. ಆಗ ಮಾತ್ರ ಶಿಕ್ಷಣದ ಉಪಯುಕ್ತತೆ ಹೆಚ್ಚುತ್ತದೆ.

ಆರ್.ವಿ.ಭಟ್ಟ, ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.