ADVERTISEMENT

ಕ್ಷಮಿಸಿಬಿಡಿ ಸಂಸದರೇ...

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 20:00 IST
Last Updated 18 ಸೆಪ್ಟೆಂಬರ್ 2019, 20:00 IST

ದಲಿತ ಎಂಬ ಕಾರಣಕ್ಕೆ ಗೊಲ್ಲರಹಟ್ಟಿಗೆ ತಮಗೆ ಪ್ರವೇಶ ನಿರಾಕರಿಸಿದಂತಹ ಅಮಾನವೀಯ ಘಟನೆ ನಡೆಯ
ಬಾರದಿತ್ತು. ಅನಕ್ಷರತೆ, ಅರಿವಿನ ಕೊರತೆ, ಮೂಢನಂಬಿಕೆ ಇದಕ್ಕೆ ಕಾರಣವೇ ಹೊರತು ಇನ್ಯಾವುದೂ ಅಲ್ಲ.

ಸಾಮಾನ್ಯವಾಗಿ ಎಲ್ಲ ಕಾಡುಗೊಲ್ಲರು ಊರಿನಿಂದ ಸುಮಾರು ಒಂದರಿಂದ ಎರಡು ಕಿಲೊಮೀಟರ್ ದೂರದಲ್ಲಿ ಪ್ರತ್ಯೇಕ ಗುಂಪುಗಳಾಗಿ ತಮ್ಮ ಹಟ್ಟಿಗಳ ಸುತ್ತ ಮುಳ್ಳಿನ ಬೇಲಿ ಹಾಕಿಕೊಂಡು ವಾಸಿಸುತ್ತಾರೆ. ಜೀವನೋಪಾಯಕ್ಕಾಗಿ ಕುರಿ, ಹಸುಗಳನ್ನು ಸಾಕುತ್ತಿದ್ದಾರೆ.

ಗ್ರಾಮಕ್ಕೆ ಬರುವ ಯಾವ ಯೋಜನೆ ಮತ್ತು ಮೂಲಭೂತ ಸೌಕರ್ಯಗಳೂ ಇವರಿಗೆ ದೊರಕುವುದಿಲ್ಲ. ಕಾಡು ಗೊಲ್ಲರ ಎಲ್ಲ ಹಟ್ಟಿಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಮಾಡಿ ಇವರಿಗೆ ಮೂಲ ಸೌಕರ್ಯ ಕೊಡಿ ಎಂದು ಎಷ್ಟು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದರೂ ಸರ್ಕಾರಗಳು ಕಿವಿಗೊಡಲೇ ಇಲ್ಲ.

ADVERTISEMENT

ಬಾಣಂತಿಯರು 21 ದಿನ ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಮೂರು ದಿನ ಹಟ್ಟಿಯಿಂದ ಹೊರಗಿಡುವ ಅವರ ಆಚರಣೆ ಇನ್ನೂ ಜೀವಂತವಾಗಿರುವುದಕ್ಕೆ ಕಾರಣ ನಮ್ಮ ಸರ್ಕಾರ. ಸರ್ಕಾರವೇ ಇದನ್ನು ಪ್ರೋತ್ಸಾಹಿಸಿ ‘ಕೃಷ್ಣಕುಟೀರ’ ಎಂದು ನಿರ್ಮಿಸಿ, ಇಂಥ ಮೌಢ್ಯಾಚರಣೆಯನ್ನು ಉತ್ತೇಜಿಸಿತು. ಹೀಗಾದರೆ ಇನ್ನು ಇವರನ್ನು ಮೌಢ್ಯದಿಂದ ಹೊರ ತರುವುದಾದರೂ ಯಾರು? ಬುಡಕಟ್ಟು ಕಾಡುಗೊಲ್ಲ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿದೆ.

ಮಾಧ್ಯಮಗಳು ಕಾಡು ಗೊಲ್ಲರಿಗೆ ಸಂಬಂಧಿಸಿದಂತೆ ಉತ್ಪ್ರೇಕ್ಷಿತ ಅಂಶಗಳನ್ನು ಬಿತ್ತರಿಸದೆ, ಅವರಲ್ಲಿ ಬದಲಾವಣೆ ತರುವುದು ಹೇಗೆ ಎಂಬುದನ್ನು ತೋರಿಸಲಿ. ಅಸ್ಪೃಶ್ಯತೆ, ಮೂಢನಂಬಿಕೆಯನ್ನು ಬುಡಸಮೇತ ಕಿತ್ತುಹಾಕುವ ಕಡೆ ಗಮನಹರಿಸಲಿ.

ವಿ.ಡಿ.ಅರುಣ್ ಯಾದವ್,ವೇಣುಕಲ್ಲುಗುಡ್ಡ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.