ADVERTISEMENT

ವಾಚಕರ ವಾಣಿ | ಜಾತಿ ಲೆಕ್ಕಾಚಾರದ ಅಸ್ತ್ರ ಸಲ್ಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:30 IST
Last Updated 21 ಮಾರ್ಚ್ 2022, 19:30 IST

‘ದಲಿತ ರಾಜಕಾರಣ: ಆಳದಲ್ಲಿ ಪಲ್ಲಟ’ ಎಂಬ, ವಾದಿರಾಜ ಅವರ ಲೇಖನದಲ್ಲಿ (ಸಂಗತ, ಮಾರ್ಚ್‌ 21) ಕೇವಲ ಅಂಕಿಅಂಶವನ್ನು ಹಿಡಿದು ಉತ್ತರಪ್ರದೇಶದ ರಾಜಕೀಯವನ್ನು ನೋಡಲಾಗಿದೆಯೇ ವಿನಾ ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ ನಡುವೆ ಮತಗಳು ಹಂಚಿಹೋಗಿ ಬಿಜೆಪಿ ಗೆದ್ದಿರುವುದನ್ನು ಮರೆಮಾಚಲಾಗಿದೆ. ಅಷ್ಟಲ್ಲದೆ ಮಾಯಾವತಿ ಅವರು ಜಾತಿ ರಾಜಕೀಯ ಮಾಡಿ ಒಂದು ಸಲ ಮುಖ್ಯಮಂತ್ರಿಯಾದರೆ ಬಿಜೆಪಿ ಅದೇ ಅಸ್ತ್ರವನ್ನು ತಿರುವುಮುರುವಾಗಿ ಬಳಸಿ ಗೆಲುವು ಸಾಧಿಸಿದ ಸಮೀಕರಣವನ್ನು ಒಪ್ಪಬಹುದಾದರೂ ಒಟ್ಟಾರೆ ಜಾತಿ ಲೆಕ್ಕಾಚಾರವೇ ಎಲ್ಲರಿಗೂ ಮಾರಕವಲ್ಲವೇ? ದಲಿತರನ್ನು ಶೋಷಿತ ಸಮುದಾಯವನ್ನಾಗಿ ನೋಡಬೇಕೇ ವಿನಾ ಜಾತಿ ಸಮುದಾಯವಾಗಿ ಅಲ್ಲ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT