ADVERTISEMENT

ಪ್ರಭುತ್ವ ಹೀಗೂ ಭಾವಿಸಬೇಕೇ?!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 19:31 IST
Last Updated 27 ಅಕ್ಟೋಬರ್ 2020, 19:31 IST

ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಇರುವುದರಿಂದ ಬೆಂಗಳೂರಿನಲ್ಲಿ ಇದೇ 26ರಿಂದ 28ರ ತನಕ ಮದ್ಯ ನಿಷೇಧಿಸುವ ಆದೇಶ ಗಮನಿಸಿ ಅವಾಕ್ಕಾಯಿತು. ಮದ್ಯಪಾನ ಆರೋಗ್ಯಕ್ಕೆ ಮಾರಕವೆಂದು ಶಾಸನಬದ್ಧವಾಗಿಯೇ ಎಚ್ಚರಿಸಲಾಗಿದೆ. ಕುಡಿತದ ದುಶ್ಚಟ ಮನುಷ್ಯನನ್ನು ಭೌತಿಕವಾಗಿಯೂ ಮಾನಸಿಕವಾಗಿಯೂ ಸೊರಗಿಸುತ್ತದೆ ಎನ್ನುವುದು ಸರ್ವರೂ ತಿಳಿದಿರಬೇಕಾದ ತಥ್ಯ.

ಗುರು–ಹಿರಿಯರು ಈ ನಿಟ್ಟಿನಲ್ಲಿ ಆಗಿಂದಾಗ್ಗೆ ಮಾರ್ಗದರ್ಶನ ನೀಡುತ್ತಾ ಜನರ ಕಣ್ಣು ತೆರೆಸುತ್ತಾರೆಂಬುದು ಸಮಾಜದ ದೃಢವಾದ ಅಪೇಕ್ಷೆ ಹಾಗೂ ಇಂತಹ ನಿರೀಕ್ಷೆ ಸಹಜವೆ. ಪ್ರಶ್ನೆಯೆಂದರೆ, ಶಿಕ್ಷಕರ ಚುನಾವಣೆ ಸಂದರ್ಭದಲ್ಲೂ ಮದ್ಯದ ಆಮಿಷವೊಡ್ಡುವುದು, ಅದರ ಆಮಿಷಕ್ಕೊಳಗಾಗುವುದು ಸಂಭಾವ್ಯವೆಂದು ಪ್ರಭುತ್ವ ಭಾವಿಸುವುದೇ? ಭಾವಿಸಬೇಕೇ?

ಬಿಂಡಿಗನವಿಲೆ ಭಗವಾನ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.