ADVERTISEMENT

ಡೆಮು ರೈಲಿಗೆ ಸಿಗಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST

ದೇಶದಲ್ಲಿ ಕೊರೊನಾ ವೈರಾಣುವಿನ ಪಸರಿಸುವಿಕೆ ನಿಯಂತ್ರಣಕ್ಕೆ ಬರುತ್ತಿದೆ. ವಾಯುಯಾನವು ಕೋವಿಡ್ ಪೂರ್ವದ ದಿನಗಳಿಗೆ ಮರಳುತ್ತಿದೆ. ಹೆಚ್ಚು ಕಡಿಮೆ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳೂ ಸ್ಪೆಷಲ್‌ ರೈಲು ಎಂದು ರೂಪಾಂತರ ಹೊಂದಿ ಓಡಾಡುತ್ತಿವೆ. ಆದರೆ, ಡೆಮು ರೈಲುಗಳು ಇದಕ್ಕೆ ಅಪವಾದ. ಅಧಿಕಾರಿಗಳು ರೈಲ್ವೆ ಮಂಡಳಿಯತ್ತಲೇ ಬೊಟ್ಟು ಮಾಡುತ್ತಿದ್ದಾರೆ. ಕಡಿಮೆ ಅಂತರದ ಎರಡು ನಗರಗಳ ಮಧ್ಯೆ ಚಲಿಸುವ ಈ ಡೆಮು ರೈಲುಗಳು ಮಾರ್ಗ ಮಧ್ಯದಲ್ಲಿನ ಎಲ್ಲ ನಿಲ್ದಾಣಗಳಲ್ಲಿ ನಿಲ್ಲುತ್ತವೆ, ಜೊತೆಗೆ ಅಗ್ಗದ ದರ. ಹೀಗಾಗಿಯೇ ಬಹಳ ಜನಾನುರಾಗಿಯಾಗಿರುವ ಈ ರೈಲುಗಳು ಹಳಿಗಳಿಂದ ಮಾಯವಾಗಿ ಹಲವಾರು ತಿಂಗಳುಗಳಾಗಿವೆ.

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈಗ ದುಬಾರಿ ರಸ್ತೆ ಮಾರ್ಗವೇ ಗತಿ. ನಿತ್ಯವೂ ಓಡಾಡುವ ರಾಯಚೂರು- ಕಲಬುರ್ಗಿ ಜನರ ಕಷ್ಟ ಹೇಳತೀರದು. ಬೀದರ್- ಕಲಬುರ್ಗಿ ಮಾರ್ಗದ ಕಥೆಯೂ ಭಿನ್ನವಾಗಿಲ್ಲ. ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ವಿಧಿಸಿ ಡೆಮು ರೈಲುಗಳ ಆರಂಭಕ್ಕೆ ರೈಲ್ವೆ ಮಂಡಳಿ ಹಸಿರು ನಿಶಾನೆ ತೋರಬೇಕಾಗಿರುವುದು ಈ ಕ್ಷಣದ ಅಗತ್ಯವಾಗಿದೆ.

- ವೆಂಕಟೇಶ ಮುದಗಲ್,ಕಲಬುರ್ಗಿ

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.