ADVERTISEMENT

ಧ್ವಜ ಹಸ್ತಾಂತರಕ್ಕೂ ಮೊದಲು...

ನಾಗೇಶ ಹೆಗಡೆ
Published 7 ಜನವರಿ 2019, 20:15 IST
Last Updated 7 ಜನವರಿ 2019, 20:15 IST

ಲಕ್ಷಾಂತರ ಜನ ಸೇರುವಲ್ಲಿ ಚಿಕ್ಕಪುಟ್ಟ ಲೋಪಗಳಾಗುವುದು ಸಹಜ. ಆದರೆ ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡ ದೊಡ್ಡ ಲೋಪಗಳ ಸಂಖ್ಯೆಯೇ ಸಾಕಷ್ಟು ದೊಡ್ಡದಿತ್ತು. ಎಲ್ಲಕ್ಕಿಂತ ದೊಡ್ಡದೆಂದರೆ, ಮುಖ್ಯರಸ್ತೆಯ ನಟ್ಟನಡುವೆ ಕಿಲೊಮೀಟರ್ ಉದ್ದಕ್ಕೂ ಪುಸ್ತಕ, ಪತಾಕೆ, ಬಟ್ಟೆಯ ಸರಮಾಲೆಯೇ ಇದ್ದಾಗ, ಬೆಂಕಿ ಆರಿಸುವ ವ್ಯವಸ್ಥೆ ಎಲ್ಲೂ ಇರಲಿಲ್ಲ; ಅಗ್ನಿಶಾಮಕ ವಾಹನಗಳು ಧಾವಿಸಿ ಬರಲು ದಾರಿಯೂ ಇರಲಿಲ್ಲ.

ರಸ್ತೆಯ ಎರಡೂ ಕಡೆ ಬೇಲಿ ಇದ್ದುದರಿಂದ ಯಾರೂ ಎಲ್ಲೂ ಓಡುವಂತೆಯೂ ಇರಲಿಲ್ಲ. ನಾವಿದ್ದ ಸಭಾಂಗಣದಲ್ಲೂ ಬೆಂಕಿ ಆರಿಸುವ ವ್ಯವಸ್ಥೆ ಇರಲಿಲ್ಲ. ಅಷ್ಟದಿಕ್ಪಾಲಕರ ಕೃಪೆಯಿಂದ ಏನೂ ದುರಂತ ಸಂಭವಿಸಲಿಲ್ಲ. ಆದರೂ ಅಗ್ನಿಶಾಮಕ ದಳ ಇದಕ್ಕೆ ಅನುಮತಿ ಕೊಟ್ಟಿದ್ದು ಹೇಗೆ? ಈ ಸಂಬಂಧವಾಗಿ ಮುಂದಿನ 85ನೇ ಕಲಬುರ್ಗಿಯ ಸಮ್ಮೇಳನಕ್ಕೆ ನನ್ನದೊಂದು ಸಲಹೆ ಇದೆ: ಬರಿದೇ ಧ್ವಜ ಹಸ್ತಾಂತರ ಮಾಡುವ ಮೊದಲು ಡಾ. ಕಂಬಾರರು 84ನೇ ಸಮ್ಮೇಳನದ ಲೋಪದೋಷಗಳ ಪಟ್ಟಿಯನ್ನೂ ಮುಂದಿನ ಅಧ್ಯಕ್ಷರಿಗೆ (ಅವರ ಆಯ್ಕೆಯಾದ ದಿನವೇ) ಹಸ್ತಾಂತರ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT