ADVERTISEMENT

ವಿಭಿನ್ನವಾದ ರಂಗಪ್ರಯೋಗ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 19:30 IST
Last Updated 31 ಜನವರಿ 2021, 19:30 IST

ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ತಂದು ಏಳು ಗಂಟೆಗಳ ರಂಗಪ್ರದರ್ಶನಕ್ಕೆ ಅಣಿಯಾಗುತ್ತಿರುವ ಮೈಸೂರಿನ ರಂಗಾಯಣದ ಸಾಹಸ ಅಭಿನಂದನೀಯ.

ಈಗಾಗಲೇ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಕೃತಿಗಳನ್ನು ಸುದೀರ್ಘವಾದ ನಾಟಕಗಳಾಗಿ ಯಶಸ್ವಿ ಪ್ರದರ್ಶನ ನೀಡಿರುವ ರಂಗಾಯಣ ತಂಡದ ಸಾಮರ್ಥ್ಯ ಸಾಬೀತಾಗಿದೆ. ಆದರೆ ಈ ಸಲ ಡಿಜಿಟಲ್ ತಂತ್ರಜ್ಞಾನ ಬಳಸಿ ಇಂಗ್ಲಿಷ್ ಸಬ್ ಟೈಟಲ್ ನೀಡುವ ಪ್ರಯತ್ನ ವಿಭಿನ್ನವಾದ ಪ್ರಯೋಗ. ಬೇರೆ ಭಾಷೆಯ ಚಲನಚಿತ್ರಗಳನ್ನು ಸಬ್ ಟೈಟಲ್ ನೆರವಿನಿಂದ ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತೆ ನಾಟಕದಲ್ಲಿಯೂ ಆದರೆ ಇದೊಂದು ಉತ್ತಮ ಬೆಳವಣಿಗೆ. ಇದರಿಂದ ಕನ್ನಡದ ಪ್ರಸಿದ್ಧ ನಾಟಕಗಳನ್ನು ಬೇರೆ ಭಾಷೆಯ ಜನರಿಗೆ ಮನಮುಟ್ಟುವಂತೆ ಪರಿಚಯ ಮಾಡಬಹುದು.

ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.