ADVERTISEMENT

ಕಲಿಸುವವರಿಗೂ, ಕಲಿಯುವವರಿಗೂ ನಿರುತ್ಸಾಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 19:30 IST
Last Updated 8 ಜುಲೈ 2020, 19:30 IST

‘ಅನುವಾದಿತ ಕನ್ನಡದ ವಿರಾಟ್ ರೂಪ!’ ಎಂಬ ಡಾ. ಜಿ.ಬೈರೇಗೌಡರ ಲೇಖನ (ಸಂಗತ, ಜುಲೈ 8) ಇಂದಿನ ಪೀಳಿಗೆಯ ಕನ್ನಡ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಕಲಿಯುವ ಬಗ್ಗೆ ಕಲಿಸುವವರಿಗೂ ಕಲಿಯುವವರಿಗೂ ನಿರುತ್ಸಾಹ ಇರುವುದು ಒಂದು ಕಡೆಯಾದರೆ, ಭಾಷೆಯ ಬಗ್ಗೆ ಪೋಷಕರು ತೋರುತ್ತಿರುವ ನಿರಾಸಕ್ತಿಯೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ಲೇಖನದಲ್ಲಿ ತಿಳಿಸಿರುವಂತೆ ಅಲ್ಪಪ್ರಾಣ, ಮಹಾಪ್ರಾಣ, ‘ಹ’ಕಾರ, ‘ಅ’ಕಾರಗಳಲ್ಲಿ ವ್ಯತ್ಯಾಸವಿಲ್ಲದೇ ನಾವು ಮಾಡುವ ಉಚ್ಚಾರಣೆ ಬರವಣಿ ಗೆಯಲ್ಲಿ ಪ್ರತಿಫಲಿಸುತ್ತದೆ.

ಹಿಂದೆಲ್ಲಾ ನಮಗೆ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ವ್ಯಾಕರಣ ಅಭ್ಯಾಸ ಕ್ಕಾಗಿಯೇ ಒಂದು ಅವಧಿ ಮೀಸಲಾಗಿರುತ್ತಿತ್ತು. ಅಂದಿನ ಶಿಕ್ಷಕರು ಕನ್ನಡವನ್ನು ಶ್ರದ್ಧೆಯಿಂದ ಕಲಿಸುತ್ತಿದ್ದರು ಮತ್ತು ವಿದ್ಯಾರ್ಥಿಗಳಾದ ನಾವು ಅಷ್ಟೇ ಶ್ರದ್ಧೆಯಿಂದ ಕಲಿಯುತ್ತಿದ್ದೆವು. ಆದರೆ ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಭಾಷಾ ಶುದ್ಧಿಗೆ ಪ್ರಾಮುಖ್ಯವೇ ಮರೆಯಾಗುತ್ತಿದೆ. ಅನುವಾದ ಮಾಡುವಾಗ ಮೂಲ ಪದಕ್ಕೆ ಹಲವು ಅರ್ಥಗಳಿರುತ್ತವೆ ಎಂಬ ಸಾಮಾನ್ಯ ಸಂಗತಿಯ ಅರಿವಿರಬೇಕಾಗುತ್ತದೆ. ಕನ್ನಡವೇ ಆಡಳಿತ ಭಾಷೆಯಾಗಿರುವ ಸರ್ಕಾರಿ ಕಚೇರಿಗಳಲ್ಲೂ ಕನ್ನಡದ ಮಟ್ಟ ತೀವ್ರ ಕುಸಿತ ಕಂಡಿರುವುದು ಕನ್ನಡದ ದುರ್ದೈವವೇ ಸರಿ.

- ಸ್ನೇಹಾ ಕೃಷ್ಣನ್, ಕೊರಟಗೆರೆ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.