ADVERTISEMENT

ಡಿ.ಕೆ. ಶಿವಕುಮಾರ್‌ ಬೆಳ್ಳಿ ತಟ್ಟೆ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 19:46 IST
Last Updated 5 ಅಕ್ಟೋಬರ್ 2018, 19:46 IST

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ಕಾಂಗ್ರೆಸ್ ಸಚಿವರಿಗೆ ಬೆಳ್ಳಿತಟ್ಟೆಯಲ್ಲಿ ಬ್ರೇಕ್ ಫಾಸ್ಟ್‌ ಉಣಬಡಿಸಿ ಮತ್ತೆ ಸುದ್ದಿಯಾಗಿದ್ದಾರೆ.

ಜನರ ಸಮಸ್ಯೆಗಳನ್ನು ಮತ್ತು ಬಡತನದ ಬೇಗೆಯನ್ನು ತಿಳಿದುಕೊಳ್ಳಲು ಗ್ರಾಮ ವಾಸ್ತವ್ಯದ ನಾಟಕವಾಡುವ ನಮ್ಮ ರಾಜಕಾರಣಿಗಳಿಗೆ ಬೆಳ್ಳಿ ತಟ್ಟೆಯ ಉಪಚಾರ ಬೇಕಾಗಿತ್ತೇ? ಐ.ಟಿ. ದಾಳಿಯಿಂದ ಹೈರಾಣಾಗಿದ್ದ ಡಿಕೆಶಿ ಅವರಿಗೂ ಇಂಥ ಕೂಟ ಏರ್ಪಡಿಸುವ ಅವಶ್ಯಕತೆ ಏನಿತ್ತು?

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನರು ಮನೆ–ಮಠ, ಭೂಮಿ ಕಳೆದುಕೊಂಡು ಕಣ್ಣಿರು ಹಾಕುತ್ತಿದ್ದಾರೆ. ಹೀಗಿರುವಾಗ ನಮ್ಮ ಸಚಿವರು ಬೆಳ್ಳಿ ತಟ್ಟೆಯಲ್ಲಿ ಉಂಡು ಕೈ ತೊಳೆಯುವುದು ಯಾವ ನ್ಯಾಯ?

ADVERTISEMENT

–ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.