ADVERTISEMENT

ತ್ಯಾಜ್ಯಕ್ಕೆ ಬೆಂಕಿ ಹಾಕದಿರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 19:45 IST
Last Updated 18 ಜನವರಿ 2019, 19:45 IST

ಮಾಗಿ ಕಾಲ ಶುರುವಾಗುತ್ತಿದ್ದಂತೆ ಒಣಗಿದ ಎಲೆ ಮತ್ತಿತರ ತ್ಯಾಜ್ಯವನ್ನು ಸುಟ್ಟು ಜನರು ಚಳಿ ಕಾಯಿಸಿಕೊಳ್ಳುತ್ತಾರೆ.
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ಪ್ರವೃತ್ತಿ ಮತ್ತಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ರೀತಿ ತ್ಯಾಜ್ಯ ಸುಡುವುದು ನಾನಾ ರೋಗಗಳನ್ನೂ ತಂದೊಡ್ಡುತ್ತದೆ.

ಒಣಗಿದ ಎಲೆಗಳ ಜೊತೆಗೆ ರಟ್ಟು, ಪ್ಲಾಸ್ಟಿಕ್‌ನಂತಹ ವಸ್ತುಗಳನ್ನೂ ಸುಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ಹೋದವರಿಗೆ ಈ ಹೊಗೆ ಹಾಗೂ ಪ್ಲಾಸ್ಟಿಕ್ ಸುಟ್ಟ ಕಮಟು ವಾಸನೆಯ ಅನುಭವವಾಗಿರುತ್ತದೆ. ಕೆಲವು ಪೌರ ಕಾರ್ಮಿಕರು ಸಹ ತ್ಯಾಜ್ಯವನ್ನು ವಿಲೇವಾರಿ ಮಾಡುವ ಬದಲು ಸುಟ್ಟು ತಮ್ಮ ಕೆಲಸ ಹಗುರ ಮಾಡಿಕೊಳ್ಳುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವಂತೆ, ತ್ಯಾಜ್ಯ ಸುಡುವುದನ್ನೂ ಕಟ್ಟುನಿಟ್ಟಾಗಿ ನಿರ್ಬಂಧಿಸಿ ಜನಸಾಮಾನ್ಯರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಸರ್ಕಾರ ಆದ್ಯತೆ ನೀಡಬೇಕು.

ADVERTISEMENT

–ಡಾ. ಜ್ಞಾನೇಶ್ವರ ಭೀಮರಾವ್ ಖಾಂಡ್ಕೆ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.