ADVERTISEMENT

ವಾಚಕರ ವಾಣಿ: ವೈದ್ಯರ ನೇಮಕಾತಿ: ಕನಿಷ್ಠ ವಯೋಮಿತಿ ಇಳಿಸಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿ, ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ದಂತ ಆರೋಗ್ಯಾಧಿಕಾರಿ ಮತ್ತು ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿಗಾಗಿ ವಿಶೇಷ ನೇಮಕಾತಿ ಸಮಿತಿಯು ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡದೆ, ನೇರ ನೇಮಕಾತಿ ಮೂಲಕ ಆಯ್ಕೆ ಮಾಡುವ ಸರ್ಕಾರದ ತೀರ್ಮಾನವು ಗ್ರಾಮೀಣ ಜನಸಮುದಾಯದ ಹಿತದೃಷ್ಟಿಯಿಂದ ಉಲ್ಲೇಖನೀಯ. ಆದರೆ, ಈ ಹುದ್ದೆಗೆ ಸಮಿತಿಯು ಕನಿಷ್ಠ ವಯೋಮಿತಿಯನ್ನು 26 ವರ್ಷಕ್ಕೆ ನಿಗದಿಗೊಳಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಪಡೆಯಲು ವಿದ್ಯಾರ್ಥಿಗಳಿಗೆ ಕನಿಷ್ಠ ಇಪ್ಪತ್ಮೂರೂವರೆ ವರ್ಷ ಹಾಗೂ ಸ್ನಾತಕೋತ್ತರ ವೈದ್ಯ ಪದವಿ ಮುಗಿಸಲು ಇಪ್ಪತ್ತಾರೂವರೆ ವರ್ಷವಾದರೂ ಆಗಿರುತ್ತದೆ. ಈಗ ನಿಗದಿಪಡಿಸಿದ ಕನಿಷ್ಠ ವಯೋಮಿತಿಯು, ಇಪ್ಪತ್ಮೂರೂವರೆ ವರ್ಷದಲ್ಲೇ ವೈದ್ಯ ಹಾಗೂ ದಂತ ವೈದ್ಯ ಪದವಿ ಪಡೆದ ಅನೇಕ ಅರ್ಹ, ಪ್ರತಿಭಾವಂತ ಯುವ ವೈದ್ಯರು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸದಂತೆ ಮಾಡಿದೆ! ಕನಿಷ್ಠ ವಯೋಮಿತಿಯನ್ನು ಈ ಹುದ್ದೆಗಳಿಗಾದರೂ 24 ವರ್ಷಕ್ಕೆ ಇಳಿಸುವುದು ಅತೀ ಅಗತ್ಯ.

–ಲೋಕೇಶ ಎಲ್. ಗೌಡ, ಗೋಕರ್ಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.