ADVERTISEMENT

ಪ್ರಾಮಾಣಿಕ ತೆರಿಗೆದಾರನ ಕಡೆಗಣನೆ ಬೇಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ನವೆಂಬರ್ 2019, 17:13 IST
Last Updated 17 ನವೆಂಬರ್ 2019, 17:13 IST

ನೇರ ತೆರಿಗೆಯಿಂದ ಶೇ 17ರಷ್ಟು ಹೆಚ್ಚುವರಿ ವರಮಾನ ತೆರಿಗೆ ಸಂಗ್ರಹದ ಗುರಿಯನ್ನು ತೆರಿಗೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿದೆ (ಪ್ರ.ವಾ., ನ. 16). ತೆರಿಗೆಯಿಂದ ವರಮಾನ ಹೆಚ್ಚಿಸಿಕೊಳ್ಳಲು ತೋರುವ ಕಾಳಜಿಯನ್ನು ನಿಷ್ಠಾವಂತ ತೆರಿಗೆದಾರರ ಕುರಿತು ಸರ್ಕಾರ ತೋರಿಸುತ್ತಿಲ್ಲ. ಸರ್ಕಾರದಿಂದ ತೆರಿಗೆದಾರನಿಗೆ ಕಡೇಪಕ್ಷ ಸೂಕ್ತ ಆರೋಗ್ಯ ವಿಮೆಯೂ ಇಲ್ಲ. ದೇಶದ ಟೋಲ್‌ಗಳಲ್ಲಿ ಉಚಿತ ಪ್ರವೇಶ ಇಲ್ಲ. ಇಂತಹ ಕೆಲವು ಸಣ್ಣಪುಟ್ಟ ಅನುಕೂಲಗಳನ್ನು ತೆರಿಗೆದಾರನಿಗೆ ಮಾಡಿಕೊಟ್ಟರೆ, ಆತ ಇನ್ನಷ್ಟು ಸಂತೋಷದಿಂದ ತೆರಿಗೆ ಕಟ್ಟಿಯಾನು. ಒಟ್ಟಿನಲ್ಲಿ, ದುಡಿಯುವ ಎತ್ತಿಗೆ ಛಡಿಯೇಟು ಎಂಬ ಗಾದೆಯು ಪ್ರಾಮಾಣಿಕ ತೆರಿಗೆದಾರನ ವಿಚಾರಕ್ಕೆ ಹೆಚ್ಚು ಅನ್ವಯವಾಗುತ್ತದೆ.‌

ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT