ADVERTISEMENT

ಸಿಗರೇಟು, ಚುಟ್ಟಾ ಸೇದಿಸದಿರಿ...

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:34 IST
Last Updated 3 ಫೆಬ್ರುವರಿ 2020, 13:34 IST

ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ ನಾಯಕರು ಮತ್ತು ಇತರ ಪಾತ್ರಧಾರಿಗಳು ಒಂದೇ ಸಮನೆ ಸಿಗರೇಟು, ಚುಟ್ಟಾ ಸೇದುವುದನ್ನು ತೋರಿಸಲಾಗುತ್ತಿದೆ. ಹೊಡೆದಾಡುವ ದೃಶ್ಯಗಳಲ್ಲೂ ಬಾಯಲ್ಲಿ ಸಿಗರೇಟು ಕಚ್ಚಿಕೊಂಡೇ ಅವರು ವೈರಿಗಳನ್ನು ಸದೆಬಡಿಯುತ್ತಾರೆ. ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಸಿನಿಮಾ ನಾಯಕರೇ ಅಸಂಖ್ಯಾತ ಯುವಕ, ಯುವತಿಯರಿಗೆ ಆದರ್ಶಪುರುಷರು! ಅವರು ಮಾಡಿದ್ದೆಲ್ಲವನ್ನೂ ಅಭಿಮಾನಿಗಳು ಮಾಡಲು ಮುಂದಾಗುತ್ತಾರೆ. ನಾಯಕರ ವೇಷಭೂಷಣ, ಕೇಶಶೈಲಿ ಎಲ್ಲವನ್ನೂ ಅನುಕರಿಸುತ್ತಾರೆ.

ಆರೋಗ್ಯ ಇಲಾಖೆಯು ತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಆಂದೋಲನದ ರೀತಿ ಜಾಗೃತಿ ಮೂಡಿಸುತ್ತಿದೆ. ಹೀಗಿರುವಾಗ, ಚಲನಚಿತ್ರಗಳಲ್ಲಿ ಪುಂಖಾನುಪುಂಖವಾಗಿ ಸಿಗರೇಟು, ಚುಟ್ಟಾ ಎಳೆಯುತ್ತಾ ಹೊಗೆ ಬಿಡುವುದನ್ನು ನೋಡಿದರೆ, ಯುವಜನ ಹೆಚ್ಚಾಗಿ ಈ ವ್ಯಸನಗಳಿಗೆ ದಾಸರಾಗುತ್ತಿರುವುದರಲ್ಲಿ ಸಿನಿಮಾಗಳೂ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ಸಿನಿಮಾ ನಿರ್ದೇಶಕರು ಮತ್ತು ಪಾತ್ರಧಾರಿಗಳು ಇನ್ನು ಮುಂದಾದರೂ ಕೇವಲ ಮನರಂಜನೆ ಹಾಗೂ ವಾಣಿಜ್ಯ ಲಾಭವನ್ನು ಮಾತ್ರ ನೋಡದೆ, ಧೂಮಪಾನವು ಯುವಜನರ ಮೇಲೆ ಬೀರಬಹುದಾದ ಪ್ರಭಾವದ ಬಗ್ಗೆಯೂ ಆಲೋಚಿಸಬೇಕು. ಚಲನಚಿತ್ರಗಳು ಸಹ್ಯವಾಗಿ ಮತ್ತು ಅರ್ಥಪೂರ್ಣವಾಗಿ ಇರುವಂತೆ ನೋಡಿಕೊಳ್ಳಬೇಕು.

ಡಾ. ಜಿ.ಡಿ.ರಾಘವನ್, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.