ADVERTISEMENT

ಶಾಲಾ ಹಂತದ ಪರೀಕ್ಷೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST

ಪಬ್ಲಿಕ್ ಪರೀಕ್ಷೆಗಳನ್ನು ರದ್ದು ಮಾಡಿ, ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡಬೇಕು ಎಂದು ಚಂದ್ರಶೇಖರ ದಾಮ್ಲೆ ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮೇ 14). ಆದರೆ, ಶಾಲಾ ಹಂತದ ಪರೀಕ್ಷೆಗಳಿಂದ ಶಾಲೆಗಳು ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ನಿದರ್ಶನವೆಂದರೆ, ಈಗ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇರುವ ಆಂತರಿಕ ಅಂಕಗಳು. ಬಹುಪಾಲು ವಿದ್ಯಾರ್ಥಿಗಳಿಗೆ ಇಪ್ಪತ್ತಕ್ಕೆ ಇಪ್ಪತ್ತು ಅಂಕಗಳನ್ನೂ ನೀಡಲಾಗುತ್ತಿದೆ. ಆದರೆ, ಅಂತಹ ವಿದ್ಯಾರ್ಥಿಗಳಲ್ಲಿ ಹಲವರು ದಿನಪತ್ರಿಕೆಯ ತಲೆಬರಹವನ್ನೂ ಸರಿಯಾಗಿ ಓದಲು ಬಾರದವರಿದ್ದಾರೆ. ಇಂತಹವರಿಗೆ 20 ಅಂಕಗಳು ಹೇಗೆ ಬಂದವು ಎಂದು ಪ್ರಶ್ನಿಸಿದರೆ, ಯಾರಲ್ಲೂ ಉತ್ತರ ಇರುವುದಿಲ್ಲ.

ಪಾಸಾಗಿ ಮುಂದಕ್ಕೆ ಹೋಗಲಿ ಎನ್ನುವ ಕೆಲವು ಶಿಕ್ಷಕರ ಔದಾರ್ಯವೇ ಶಿಕ್ಷಣದ ಗುಣಮಟ್ಟ ಕ್ಷೀಣಿಸಲು ಕಾರಣವಾಗಿದೆ. ಇನ್ನು ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಿ, ಅಲ್ಲೇ ಮೌಲ್ಯಮಾಪನ ಮಾಡುವ ವಿದ್ಯಮಾನ ಹೇಗಿರಬಹುದು? ಅರೆಬರೆ ಅಕ್ಷರ ಜ್ಞಾನದ ವಿದ್ಯಾರ್ಥಿಗೂ ಡಿಸ್ಟಿಂಕ್ಷನ್‌ ಕೊಟ್ಟು ಕಾಲೇಜು ಮೆಟ್ಟಿಲು ಹತ್ತಿಸಬಹುದು. ಆದಕಾರಣ, ಪಬ್ಲಿಕ್ ಪರೀಕ್ಷೆಗಳನ್ನೇ ಇನ್ನಷ್ಟು ಕಟ್ಟುನಿಟ್ಟಿನಿಂದ ನಡೆಸುವುದು ಸೂಕ್ತ ಎನಿಸುತ್ತದೆ. ಆನ್‌ಲೈನ್ ಪರೀಕ್ಷಾ ವ್ಯವಸ್ಥೆ ಜಾರಿಯಾದರೆ ಪರೀಕ್ಷಾ ಪ್ರಕ್ರಿಯೆಯ ಗುಣಮಟ್ಟ ಸುಧಾರಿಸಬಹುದು.

- ಕಲ್ಮೇಶ ಬಿರಾದಾರ,ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.