ಮಳೆ ಬಾರದೆ ನೀರಿನ ಕೊರತೆಯಿಂದ ಕಂಗಾಲಾದ ಹಳ್ಳಿಯ ಜನರಿಗೆ, ಸ್ವಹಿತ ಬಯಸದೆನೀರು ನೀಡುತ್ತಿರುವವರು (ಪ್ರ.ವಾ., 21) ನಿಜಕ್ಕೂ ಶ್ಲಾಘನೀಯರು.
ಜೀವಜಂತುಗಳಿಗೆ ಜೀವಜಲ ಒದಗಿಸುತ್ತಿರುವುದು ಮಹಾಪುಣ್ಯದ ಕೆಲಸ. ಇಂಥ ಸಕ್ರಿಯಾತ್ಮಕ ಮಹಾನುಭಾವರನ್ನು ಸಂಘ ಸಂಸ್ಥೆಗಳು ಸನ್ಮಾನಿಸಬೇಕು.
ಈ ನಿಟ್ಟಿನಲ್ಲಿ, ಹಲವಾರು ವರ್ಷಗಳಿಂದ ವಾದ ವಿವಾದಗಳ ಸುಳಿಗೆ ಸಿಲುಕಿರುವ ನಮ್ಮ ಕಾವೇರಿ ನದಿಯ ನೀರನ್ನು ನಿಯಮಕ್ಕೆ ಅನುಗುಣವಾಗಿ ಚೆನ್ನೈ ಜೊತೆ ಹಂಚಿಕೊಳ್ಳುವುದು ತಪ್ಪಲ್ಲ ಎನಿಸುತ್ತದೆ.
ಪೂರ್ಣಿಮಾ ಮೂರ್ತಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.