ADVERTISEMENT

ಗುಪ್ತ ವರದಿ ಪಡೆಯಲಿಲ್ಲವೇ?

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 14:48 IST
Last Updated 8 ಸೆಪ್ಟೆಂಬರ್ 2020, 14:48 IST

ರಾಜ್ಯದ ಯುವ ಪೀಳಿಗೆಯು ಮಾದಕ ವಸ್ತುವಿನ ಪಾಶಕ್ಕೆ ಸಿಲುಕುತ್ತಿದೆ ಎಂಬ ವರದಿಗಳು ಜನರಲ್ಲಿ ಆತಂಕ ಹುಟ್ಟಿಸುತ್ತಿವೆ. ಮಾದಕ ವಸ್ತುಗಳ ಬಳಕೆ ಅತ್ಯಂತ ಹಾನಿಕಾರಕ. ಇದು ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ಪಿಡುಗು. ಈ ಜಾಲ ಹೊಂದಿರುವ ಸಂಪರ್ಕವನ್ನು ಗಮನಿಸಿದರೆ, ಗುಪ್ತಚರ ಇಲಾಖೆಯು ಈ ಬಗ್ಗೆ ಇಲ್ಲಿಯವರೆಗೆ ಕಾಲಕಾಲಕ್ಕೆ ಗುಪ್ತ ವರದಿ ಪಡೆಯಲು ಪ್ರಯತ್ನಿಸಲಿಲ್ಲವೇ ಎಂಬ ಶಂಕೆ ಬರುವುದು ಸಹಜ.

ರಾಜ್ಯದ ಪೊಲೀಸ್‌ ವಲಯದಲ್ಲಿ ಅತ್ಯಂತ ಕ್ರಿಯಾಶೀಲ ಹಾಗೂ ನಿಷ್ಠಾವಂತ ಅಧಿಕಾರಿಗಳು ಇದ್ದಾರೆ. ಅಧಿಕಾರಿಗಳು ಈಗ ತ್ವರಿತ ಕಾರ್ಯಾಚರಣೆ ನಡೆಸುತ್ತಿರುವುದು ಶ್ಲಾಘನೀಯ. ಪಟ್ಟಭದ್ರ ಹಿತಾಸಕ್ತಿಗಳು ಕೈವಾಡ ನಡೆಸಿ ಕಾನೂನು ಕಣ್ಣು ತಪ್ಪಿಸಲು ಅವಕಾಶ ಸಿಗಬಾರದು. ಇದು ಗೃಹ ಇಲಾಖೆಯ ಪ್ರಮುಖ ಹೊಣೆಗಾರಿಕೆ. ಚಿತ್ರರಂಗದಲ್ಲಿನ ಕೆಲವರು ಮಾದಕವಸ್ತು ಬಳಸುತ್ತಿದ್ದಾರೆ ಎಂಬ ವರದಿಗಳು ಸಮಾಜಕ್ಕೆ ದಿಗ್ಭ್ರಮೆ ಹುಟ್ಟಿಸುತ್ತಿವೆ. ಈ ಜಾಲದಲ್ಲಿ ಬೇರುಬಿಟ್ಟಿರುವ ದುಷ್ಟ ಶಕ್ತಿಗಳ ಹೆಡೆಮುರಿ ಕಟ್ಟಿ, ಜೈಲಿಗೆ ಕಳಿಸುವ ದಿಟ್ಟ ಕ್ರಮ ಕೈಗೊಳ್ಳಬೇಕು. ಆಗ ಜನರಿಗೆ ಸರ್ಕಾರದ ಕಾರ್ಯಾಚರಣೆಯಲ್ಲಿ ನಂಬಿಕೆ ಬರುತ್ತದೆ.

- ವಿ.ಸುರೇಶ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.