ADVERTISEMENT

ಪಾತಾಳಕ್ಕಿಳಿದಿರುವ ಶಿಕ್ಷಣದ ಮಟ್ಟ

ರಮಾನಂದ ಶರ್ಮಾ, ಬೆಂಗಳೂರು
Published 1 ಡಿಸೆಂಬರ್ 2019, 20:29 IST
Last Updated 1 ಡಿಸೆಂಬರ್ 2019, 20:29 IST

ಉತ್ತರ ಪ್ರದೇಶದ ಜಿಲ್ಲಾಧಿಕಾರಿಯೊಬ್ಬರು ಇತ್ತೀಚೆಗೆ ದಿಢೀರ್‌ ಎಂದು ಒಂದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನು ಪರೀಕ್ಷಿಸಿದ್ದಾರೆ. ಐದರಿಂದ ಏಳನೇ ತರಗತಿಯ ಒಬ್ಬ ವಿದ್ಯಾರ್ಥಿಗೂ ಇಂಗ್ಲಿಷ್ ಪಾಠವನ್ನು ತಡವರಿಸದೇ ಓದಲು ಬರಲಿಲ್ಲವಂತೆ. ಹಾಗೆಯೇ ಅವರಿಗೆ ಕಲಿಸಿದ ಶಿಕ್ಷಕರಿಗೂ ಓದಲು
ಬಂದಿರಲಿಲ್ಲವಂತೆ. ಈ ವೈಫಲ್ಯದ ಬಗೆಗೆ ಅವರು ವಿಚಾರಣೆಗೆ ನಿರ್ದೇಶಿಸಿದ್ದು ಬೇರೆ ಮಾತು.

ಉತ್ತರದ ರಾಜ್ಯಗಳಲ್ಲಿಯೂ ಇಂಗ್ಲಿಷನ್ನು ಮಕ್ಕಳ ಮನಸ್ಸಿನಲ್ಲಿ ತುರುಕಲು ಹೊರಟಿರುವುದೇ ಇದಕ್ಕೆ ಕಾರಣ ಇರಬಹುದು ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ವಿಪರ್ಯಾಸವೆಂದರೆ, ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇವರೇ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಾರೆ ಎನ್ನುವ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT