ADVERTISEMENT

ಬಂದಿ ಆಗಬಯಸದವರಿಗೆ...

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 17:09 IST
Last Updated 1 ಆಗಸ್ಟ್ 2021, 17:09 IST

ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ ಶಿಕ್ಷಣ ಮುಂದುವರಿಸಲುರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆಯು (ಎನ್ಐಒಎಸ್) ನಿಜಕ್ಕೂ ಆಶಾಕಿರಣವಾಗಿದೆ. ಡಾ. ಎಚ್.ಬಿ.ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟಿರುವಂತೆ (ಸಂಗತ, ಜುಲೈ 31), ಅರ್ಧಕ್ಕೆ ಶಾಲೆ ತೊರೆಯುವವರಿಗೆ ಇದು ಭರವಸೆಯ ಕಿರಣ. ಶಾಲೆ ತೊರೆಯದ ಮಕ್ಕಳು ಕೂಡ ತಮ್ಮಿಚ್ಛೆಯಂತೆ ಓದಲು ಈ ಸಂಸ್ಥೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಶಾಲೆಗಳಲ್ಲಿ ಬೆಳಗಿನಿಂದ ಸಂಜೆಯವರೆಗೆ ಬೇರೇನೂ ಚಟುವಟಿಕೆ, ಹವ್ಯಾಸ, ಆಟೋಟಗಳಲ್ಲಿ ತೊಡಗಲಾಗದೆ ಕೂರಬೇಕೆಂಬುದು ಮತ್ತು ಇಲ್ಲಿ ವಿಷಯಗಳ ಆಯ್ಕೆಯ ಅವಕಾಶಗಳು ಹೇರಳವಾಗಿರುವುದು ಇದಕ್ಕೆ ಕಾರಣ. ಆದರೆ ಇದರಲ್ಲಿ ಇನ್ನೂ ಕನ್ನಡ ಮಾಧ್ಯಮವನ್ನು ಜಾರಿಗೆ ತಂದಿಲ್ಲ. ಮಕ್ಕಳು ಉತ್ತರಗಳನ್ನು ಕನ್ನಡದಲ್ಲಿ ಬರೆಯಬಹುದು, ಆದರೆ ಪ್ರಶ್ನೆಪತ್ರಿಕೆಗಳನ್ನು ಒದಗಿಸುವುದಿಲ್ಲ. ಕನ್ನಡದಲ್ಲಿ ಪಠ್ಯಪುಸ್ತಕಗಳೂ ಇಲ್ಲ. ಈ ತಿಂಗಳು 10ನೇ ತರಗತಿ ಪಠ್ಯಪುಸ್ತಕಗಳು ಕನ್ನಡದಲ್ಲಿ ಬರುತ್ತವೆ ಎಂದು ಸಂಸ್ಥೆ ಹೇಳಿದೆ.

ಇದೇ ರೀತಿ ಕರ್ನಾಟಕ ಸರ್ಕಾರದ ಮುಕ್ತ ಶಾಲಾ ವ್ಯವಸ್ಥೆ ಇದೆ. ಖಾಸಗಿ ಶಾಲೆಗಳ ಶುಲ್ಕದ ಹಾವಳಿಯ ನಡುವೆ ಇವು ಉತ್ತಮ ಪರ್ಯಾಯ ಮಾರ್ಗಗಳಾಗಿವೆ ಮತ್ತು ಶಾಲೆಯ ಕೊಠಡಿಯೊಳಗೆ ಬಂದಿಯಾಗಲು ಬಯಸದ ಮಕ್ಕಳಿಗೆ ನಿಜವಾಗಲೂ ಅತ್ಯುತ್ತಮ ಆಯ್ಕೆಗಳಾಗಿವೆ.

ನಾಗಮಣಿ ಎಸ್.ಎನ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.