ADVERTISEMENT

ಉಪಚುನಾವಣೆ: ಆಮಿಷಕ್ಕೆ ಸಿಲುಕದಿರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 19:30 IST
Last Updated 1 ನವೆಂಬರ್ 2020, 19:30 IST

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಹಣ, ಮದ್ಯ, ಜಾತಿ ಲೆಕ್ಕಾಚಾರದಲ್ಲಿ ಮತಗಳನ್ನು ಸೆಳೆಯಲು ಯತ್ನಸುತ್ತಿವೆ. ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿರುವುದು ದೇಶದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮತ ಚಲಾಯಿಸಲು. ದೇಶ ಅಭಿವೃದ್ಧಿ ಆದಾಗಲೇ ಎಲ್ಲರ ಜೀವನ ಸುಧಾರಿಸುತ್ತದೆ. ಹಣ, ಮದ್ಯ, ಜಾತಿ, ಧರ್ಮದ ಮೋಹಕ್ಕೆ ಸಿಲುಕಿ ಮತ ಚಲಾಯಿಸಿದರೆ ಮತವನ್ನು ಮಾರಿಕೊಂಡಂತೆ. ಮತದಾರರು ಯಾವುದೇ ಆಸೆಗೆ ಒಳಗಾಗದೆ ಮತ ಚಲಾಯಿಸಬೇಕಿದೆ.

- ಸಣ್ಣಮಾರಪ್ಪ, ಚಂಗಾವರ,ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT