ADVERTISEMENT

ಪರಿಸರ ಕೇಳದು ನಮ್ಮ ಮಾತು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST

ಪ್ರವಾಹದಿಂದ ಪರಿತಪಿಸಿದ ಉತ್ತರ ಕರ್ನಾಟಕದ ಜನರಿಗೆ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. 2009ರಲ್ಲಿ ಇದೇ ರೀತಿ ಪ್ರವಾಹ ಉಂಟಾದಾಗಲೂ ಸರ್ಕಾರ ಪುನರ್ವಸತಿ ಕಲ್ಪಿಸಿತ್ತು. ಆಗಲೇ ನದಿಗಳು ‘ನಮ್ಮ ದಾರಿಗೆ ಅಡ್ಡವಾಗಿ ಬದುಕು ಕಟ್ಟಿಕೊಳ್ಳಬೇಡಿ’ ಎಂದು ಎಚ್ಚರಿಸಿದ್ದರೂ ನಾವು ಪಾಠ ಕಲಿಯಲಿಲ್ಲ.

ಪ್ರವಾಹದಿಂದ ಪುನರ್ವಸತಿಗೊಂಡ ಕೆಲವು ಗ್ರಾಮಗಳ ಜನರು ತಮಗೆ ಪುನರ್ವಸತಿ ಒದಗಿಸಿದೆಡೆಗೆ ಸ್ಥಳಾಂತರಗೊಳ್ಳದೆ ಹಳೆಯ ಗ್ರಾಮಗಳಲ್ಲೇ ಉಳಿದುಕೊಂಡಿದ್ದರಿಂದ ಮತ್ತೆ ಪ್ರವಾಹದ ಅನಾಹುತಕ್ಕೆ ಗುರಿಯಾಗಬೇಕಾಯಿತು. ಈಗಲಾದರೂ ನದಿ, ಹಳ್ಳಗಳ ಚಲನೆಗೆ ಅಡ್ಡಿಯಾಗದಂತೆ ಬದುಕು ಕಟ್ಟಿಕೊಂಡರೆ ಪರಿಸರವೂ ಉಳಿಯುತ್ತದೆ ನಾವೂ ಉಳಿಯುತ್ತೇವೆ.

ಪರಿಸರ ಹೇಳಿದಂತೆ ನಾವು ಕೇಳಬೇಕೇ ಹೊರತು ನಾವು ಹೇಳಿದಂತೆ ಪರಿಸರ ಕೇಳುವುದಿಲ್ಲ. ಯಾವ ನದಿಯೂ ಮನುಷ್ಯನನ್ನು ಕೇಳಿ ತನ್ನ ಹರಿವಿನ ದಿಕ್ಕನ್ನು ನಿರ್ಧರಿಸುವುದಿಲ್ಲ!

ADVERTISEMENT

-ಅಶೋಕ ಓಜಿನಹಳ್ಳಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.