ADVERTISEMENT

ವಾಚಕರ ವಾಣಿ | ಪರೀಕ್ಷೆ ಮುಂದೂಡುವ ಆಗ್ರಹ ಸಲ್ಲದು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 17:41 IST
Last Updated 4 ಆಗಸ್ಟ್ 2020, 17:41 IST

ಕೊರೊನಾ ಸೋಂಕಿನ ಕಾರಣದಿಂದ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ತಡೆ ನೀಡಬೇಕೆಂದು ಕೆಲ ಅಭ್ಯಥಿ೯ಗಳು ಆಗ್ರಹಿಸುತ್ತಿದ್ದಾರೆ. ಇದಕ್ಕೆ, ತರಬೇತಿ ಕೆಂದ್ರಗಳಿಲ್ಲ ಎಂಬ ನೆವ ಹೇಳುತ್ತಿದ್ದಾರೆ. ಇದು ಸರಿಯಲ್ಲ. ಹಲವು ಅಭ್ಯರ್ಥಿಗಳು ಲಾಕ್‌ಡೌನ್ ನಡುವೆಯೂ ಬಾಡಿಗೆ ರೂಮ್ ಮಾಡಿಕೊಂಡು ಪರೀಕ್ಷೆಗಾಗಿ ತಿಂಗಳಾನುಗಟ್ಟಲೆಯಿಂದ ತಯಾರಿ ನಡೆಸಿದ್ದಾರೆ. ಹೀಗಿರುವಾಗ ಪರೀಕ್ಷೆಯನ್ನು ಮುಂದೂಡುವುದು ಸರಿಯೇ?

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ನಮ್ಮ ಸಹೋದರರು ಈಗಾಗಲೇ ಧೈಯ೯ವಾಗಿ ಎದುರಿಸಿದ್ದಾರೆ. ಅಂತಹುದರಲ್ಲಿ, ತರಬೇತಿಯಿಲ್ಲ ಎಂಬ ನೆವ ಮುಂದೊಡ್ಡಿ, ಪರೀಕ್ಷೆ ಮುಂದೂಡಲು ನಾವೇಕೆ ಆಗ್ರಹಿಸಬೇಕು?

-ಭೀಮರಾಯ ಬಿ. ರಾಮಸಮುದ್ರ, ಯಾದಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.