ADVERTISEMENT

ದಶಕದ ನೀರಿನ ಹೋರಾಟ ಅಂತ್ಯಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:20 IST
Last Updated 23 ಡಿಸೆಂಬರ್ 2020, 21:20 IST

ರಾಜ್ಯದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಯಲ್ಲಿ ಕೆಲವು ಪಂಚಾಯಿತಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಇವುಗಳಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಂಚಲದೊರೆ ಮತ್ತು ಅಂಕಸಂದ್ರ ಪಂಚಾಯಿತಿಗಳೂ ಸೇರಿವೆ.

ಮಂಚಲದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ‌ಕೆರೆಗೆ ಹೇಮಾವತಿ ನದಿ ನೀರು ಹರಿಸುವ ಟೆಂಡರ್ ಆಗಿದ್ದ ಯೋಜನೆಗೆ ಮೀಸಲಿಟ್ಟಿದ್ದ ಹಣವನ್ನು ಸರ್ಕಾರವು ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಬಳಸಿದೆ. ಇದುವರೆಗೆ ಪುನಃ ಹಣ ಮಂಜೂರು ಮಾಡದಿರುವುದನ್ನು ಖಂಡಿಸಿ ಈ ವ್ಯಾಪ್ತಿಯ ಗ್ರಾಮಸ್ಥರು ಒಮ್ಮತದ ತೀರ್ಮಾನದಿಂದ ಚುನಾವಣೆ ಬಹಿಷ್ಕರಿಸಿದ್ದಾರೆ.

ರೈತರು ಅಂತರ್ಜಲದ ಕೊರತೆಯಿಂದ ತಮ್ಮ ಕೃಷಿ ಆದಾಯವನ್ನೆಲ್ಲಾ ಕೊಳವೆಬಾವಿ ಕೊರೆಸಲು ವ್ಯಯಿಸುತ್ತಿದ್ದಾರೆ. ಮಠದಕೆರೆಗೆ ನೀರು ಹರಿಸುವ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ಜೀವ ತುಂಬಿ ಅಗತ್ಯ ಹಣ ನೀಡಿದರೆ, ಈ ಭಾಗದ ರೈತ ಬದುಕಿಕೊಳ್ಳುತ್ತಾನೆ. ಅವರು ಇತ್ತ ಗಮನಹರಿಸಿ, ಇಲ್ಲಿನ ಒಂದೂವರೆ ದಶಕದ ನೀರಿನ ಹೋರಾಟಕ್ಕೆ ಅಂತ್ಯ ಕಾಣಿಸಬೇಕು.
-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.