ADVERTISEMENT

ವಾಚಕರ ವಾಣಿ: ಮುಷ್ಟಿ ಯುದ್ಧಕ್ಕೆ ಬೇರೆ ಸ್ಥಳ ಇದೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST

ಶಾಸಕ ಬೆಳ್ಳಿ ಪ್ರಕಾಶ್‌ ಹಾಗೂ ಸಚಿವ ನಾರಾಯಣಗೌಡ ಅವರು ವಿಧಾನಸಭೆಯ ಕ್ಯಾಂಟೀನ್‌ನಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿಕೊಂಡಿದ್ದಾರೆ (ಪ್ರ.ವಾ., ಸೆ. 22). ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ನಾಯಕರ ಇಂತಹ ವರ್ತನೆ ಬೇಸರ ತರಿಸುವಂತಹದ್ದು. ಅದರಲ್ಲೂ ಒಂದೇ ಪಕ್ಷದ ನಾಯಕರಾಗಿ ಕೇವಲ ವರ್ಗಾವಣೆ ವಿಚಾರದಲ್ಲಿ ಅವರು ಈ ರೀತಿ ನಡೆದುಕೊಳ್ಳಬಾರದಿತ್ತು. ಇವರನ್ನು ಆರಿಸಿ ಕಳುಹಿಸಿರುವ ನಮ್ಮಂಥ ಜನಸಾಮಾನ್ಯರು ಇಂತಹವರಿಂದ ಏನು ನಿರೀಕ್ಷೆ ಮಾಡಬಹುದು?

ಒಂದು ವರ್ಷದಿಂದ ರಾಜ್ಯ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿ ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ, ಸಾರ್ವಜನಿಕ ಹಿತಾಸಕ್ತಿಯಿಂದ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ, ಅನುಮೋದನೆ ಪಡೆದುಕೊಂಡು ಜನರ ಕಷ್ಟಗಳನ್ನು ಪರಿಹರಿಸಲು ಅಧಿವೇಶನದ ಸಂದರ್ಭವನ್ನು ಬಳಸಿಕೊಳ್ಳಬೇಕೇ ವಿನಾ ಈ ರೀತಿಯ ಮುಷ್ಟಿ ಯುದ್ಧಕ್ಕಲ್ಲ. ಅದಕ್ಕೆ ಬೇಕಾದರೆ ಬೇರೆ ಸ್ಥಳ ಇದೆ.

-ಹರವೆ ಸಂಗಣ್ಣ ಪ್ರಕಾಶ್, ಹರವೆ, ಚಾಮರಾಜನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.