ADVERTISEMENT

ತಾಜಾ ಹಾಲು ಇಲ್ಲವೇ ಪೇಡಾ ನೀಡಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 20:03 IST
Last Updated 14 ಜುಲೈ 2019, 20:03 IST

ರಾಜ್ಯದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುತ್ತಿರುವ, ಹಾಲಿನ ಪುಡಿಯಿಂದ ತಯಾರಿಸಿದ ಹಾಲು ವಾಕರಿಕೆ ತರಿಸುವಂತೆ ಇರುತ್ತದೆ. ಹಾಲಿನ ಪುಡಿ ಗುಣಮಟ್ಟದ್ದಾಗಿದ್ದರೂ ಅದನ್ನು ಮಿಶ್ರಣ ಮಾಡುವಲ್ಲಿನ ಲೋಪ, ಕಾಯಿಸುವ ವಿಧಾನದಲ್ಲಿನ ಗೊಂದಲ, ಸಕ್ಕರೆ ಪ್ರಮಾಣದಲ್ಲಾಗುವ ವ್ಯತ್ಯಾಸದಿಂದಾಗಿ ಮಕ್ಕಳು ಮುಖ ಸಿಂಡರಿಸಿಕೊಂಡು ಅದನ್ನು ಕುಡಿಯುವಂತೆ ಆಗಿದೆ.

ಎಷ್ಟೋ ಶಾಲೆಗಳಲ್ಲಿ ಮಕ್ಕಳು ಈ ಹಾಲು ಕುಡಿಯದ ಕಾರಣ, ಹಾಲಿನ ಪುಡಿಯ ದುರುಪಯೋಗ ಆಗುತ್ತಿದೆ. ಅವಧಿ ಮುಗಿದ ಬಳಿಕ ಜಾನುವಾರುಗಳಿಗೆ ಕೊಡುವ ಇಲ್ಲವೇ ತಿಪ್ಪೆಗೆ ಎಸೆಯಬೇಕಾದ ಪರಿಸ್ಥಿತಿ ಒದಗಿದೆ. ಹೀಗಾಗಿ, ಸರ್ಕಾರ ಹಾಲಿನ ಪುಡಿ ಪೂರೈಸುವ ಬದಲು, ಸ್ಥಳೀಯ ಡೇರಿಗಳಿಂದ ತಾಜಾ ಹಾಲು ಪೂರೈಕೆ ಮಾಡಬೇಕು. ಇಲ್ಲವಾದರೆ, ಹಾಲಿನಿಂದ ತಯಾರಿಸಿದ ಪೇಡಾ ನೀಡಿದರೂ ಸಮಸ್ಯೆ ಬಗೆಹರಿಯುತ್ತದೆ.

– ಮಧುಸೂದನ, ಮದ್ದೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.