ADVERTISEMENT

ಅಭಿಮಾನ, ಅವಮಾನಗಳ ಅವಲೋಕನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:30 IST
Last Updated 6 ನವೆಂಬರ್ 2020, 19:30 IST

ಕರ್ನಾಟಕದ ಅಭಿವೃದ್ಧಿಯ ವೈಖರಿಯನ್ನು ಕುರಿತ ಸಂಪಾದಕೀಯ (ಪ್ರ.ವಾ., ನ. 5) ನಮ್ಮ ರಾಜಕಾರಣಿಗಳನ್ನೂ ಅಧಿಕಾರಿ ವರ್ಗವನ್ನೂ ಎಚ್ಚರಿಸುವಂತಿತ್ತು. ಭಾರತದ ಇತರ ರಾಜ್ಯಗಳೊಂದಿಗೆ ಹೋಲಿಸಿದಾಗ ಅಭಿವೃದ್ಧಿಯ ದೃಷ್ಟಿ ಯಿಂದ ಕರ್ನಾಟಕ ಎರಡನೆಯ ಸ್ಥಾನದಲ್ಲಿದ್ದರೂ ಸಮಾನತೆಯ ಸೂಚ್ಯಂಕದಲ್ಲಿ ನಾವು 12ನೇ ಸ್ಥಾನಕ್ಕೆ ಇಳಿ ದಿದ್ದು ಹೇಗೆ? ಆಂಧ್ರಪ್ರದೇಶ, ಕೇರಳ ಮತ್ತು ಛತ್ತೀಸಗಡ ರಾಜ್ಯಗಳು ಸಮಾನತೆಯ ಮೊದಲ ಮೂರು ಸ್ಥಾನಗಳಿಗೆ ಹೇಗೆ ಏರಿ ಕೂತಿವೆ ಎಂಬುದನ್ನು ನಮ್ಮ ಯೋಜನಾ ತಜ್ಞರು
ಪರಿಶೀಲಿಸಬೇಕಾಗಿದೆ. ಮುಂಗಡಪತ್ರದ ಗಾತ್ರ ವರ್ಷವರ್ಷಕ್ಕೂ ಹಿಗ್ಗುತ್ತ ಹೋದರಷ್ಟೇ ಸಾಲದು, ಸಂಪತ್ತಿನ ವಿತರಣೆ
ಹೇಗಾಗುತ್ತಿದೆ, ಹೇಗಾಗಬೇಕು ಎಂಬ ಚರ್ಚೆ ಮುಖ್ಯವಾಹಿನಿಗೆ ಬರಬೇಕೆಂದರೆ, ರಾಜ್ಯರಾಜ್ಯಗಳ ನಡುವೆ ನಡೆದ ಇಂಥ ಅಧ್ಯಯನದ ಮಾದರಿಯಲ್ಲಿ ನಮ್ಮ ಜಿಲ್ಲೆ-ಜಿಲ್ಲೆಗಳನ್ನೂ ಹೋಲಿಸಿ ನೋಡಬೇಕಾದ ಅಗತ್ಯವಿದೆ. ಆಗಮಾತ್ರ ಜಿಲ್ಲಾ ಪಂಚಾಯಿತಿಗಳ, ಜಿಲ್ಲಾಧಿಕಾರಿಗಳ ದಕ್ಷತೆಯ ತುಲನೆ ಹಾಗೂ ಚರ್ಚೆ ಸಾಧ್ಯವಾಗುತ್ತದೆ; ಅಷ್ಟೇ ಅಲ್ಲ, ಜಾತಿ-ಧರ್ಮಗಳ ಹೆಸರಿನಲ್ಲಿ ಮತದಾರರನ್ನು ಓಲೈಸುವ ಹುನ್ನಾರಗಳಿಗೂ ತುಸು ಲಗಾಮು ಹಾಕಬಹುದೇನೊ.

- ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT