ADVERTISEMENT

ಮಡಿಲು’ ಮತ್ತೆ ಆರಂಭವಾಗಲಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 19:45 IST
Last Updated 16 ಮಾರ್ಚ್ 2020, 19:45 IST

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಳೆದ ಬಾರಿ ಅಧಿಕಾರದಲ್ಲಿದ್ದಾಗ ‘ಮಡಿಲು’ ಎಂಬ ಯೋಜನೆಯನ್ನು ಜಾರಿಗೆ ತಂದು, ತಾಯಿ– ಮಗುವಿನ ಆರೋಗ್ಯಕ್ಕೆ ವೈಜ್ಞಾನಿಕವಾಗಿ ಉಪಯೋಗವಾಗುವಂತಹ ಪರಿಕರಗಳ ಕಿಟ್‌ ಅನ್ನು ಬಡ ಬಾಣಂತಿಯರಿಗೆ ಉಚಿತವಾಗಿ ಕೊಡುತ್ತಿದ್ದರು.

ಬಾಣಂತಿ– ಮಕ್ಕಳ ಸಾವಿನ ಸಂಖ್ಯೆಯನ್ನು ಇಳಿಸುವಲ್ಲಿಯೂ ಇದು ಸಹಕಾರಿಯಾಗಿತ್ತು.
ಈಗ ಈ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದಿಂದ ಬಾಣಂತಿ– ಮಕ್ಕಳಿಗೆ ಸ್ವಲ್ಪ ಧನಸಹಾಯ ದೊರೆಯುತ್ತದೆ.

ಆದರೆ ಅನೇಕ ವೇಳೆ ಮನೆಯವರೇ ಅದನ್ನು ಕಸಿದುಕೊಳ್ಳುತ್ತಾರೆ, ಇಲ್ಲವೇ ಬಾಣಂತಿಯರು ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಲೆಕ್ಕಿಸದೆ ಆ ಹಣದಲ್ಲಿ ಒಡವೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಸರ್ಕಾರ ಈ ನೆರವನ್ನು ಇನ್ನಷ್ಟು ವೈಜ್ಞಾನಿಕವಾಗಿ ರೂಪಿಸಿ, ಉಪಯೋಗಕ್ಕೆ ಬರುವ ವಸ್ತುಗಳನ್ನು ಕೊಟ್ಟು, ಯೋಜನೆ ಸದುಪಯೋಗ ಆಗುವಂತೆ ನೋಡಿಕೊಳ್ಳಲಿ. ಜೊತೆಗೆ ಮಡಿಲು ಯೋಜನೆ ಮತ್ತೆ ಮುಂದುವರಿಯಲಿ.

ನಳಿನಿ ಡಿ.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.