ADVERTISEMENT

ಕಾಲಕ್ಕೆ ತಕ್ಕಂತೆ ಬದಲಾಗಿ!

ಶಾಂತ್ ರಾಜ್ ಕೆ.ಜಿ‌.ಚಿರಡೋಣಿ ದಾವಣಗೆರೆ
Published 22 ಅಕ್ಟೋಬರ್ 2018, 20:01 IST
Last Updated 22 ಅಕ್ಟೋಬರ್ 2018, 20:01 IST

ಸರ್ಕಾರಿ ಶಾಲೆಗಳನ್ನು ಉಳಿಸಲು ಹತ್ತು-ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹೊಸ ಹೊಸ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಕಾಲಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳು ಬದಲಾಗುವುದೂ ಅಗತ್ಯ.

ಈಗ ಕಾಲ ಬದಲಾಗಿದೆ. ತಮ್ಮ ಮಕ್ಕಳೂ ಬಣ್ಣಬಣ್ಣದ ಸಮವಸ್ತ್ರ, ಟೈ, ಬೂಟು ಧರಿಸಿಕೊಂಡು ಶಾಲೆಗೆ ಹೋಗಬೇಕು ಎಂದು ಎಲ್ಲ ಪೋಷಕರೂ ಬಯಸುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಸಮವಸ್ತ್ರವನ್ನು ಬದಲಿಸುವುದು ಅಗತ್ಯವಾಗಿದೆ. ಖಾಸಗಿ ಶಾಲೆಗಳ ಸಮವಸ್ತ್ರಗಳ ರೀತಿಯಲ್ಲೇ ಹೊಸ ವಿನ್ಯಾಸದ ಸಮವಸ್ತ್ರ, ಕೊರಳಿಗೆ ನೇತುಹಾಕುವ ಐ.ಡಿ ಕಾರ್ಡ್‌ಗಳನ್ನೂ ಮಕ್ಕಳಿಗೆ ಒದಗಿಸಬೇಕು. ಶಾಲೆಯೊಳಗೆ ಹೊಸ ವಾತಾವರಣ ನಿರ್ಮಿಸಿ, ಬದ್ಧತೆಯಿಂದ ಬೋಧಿಸುವ ಶಿಕ್ಷಕರ ನೇಮಕ ಮಾಡಿದರೆ ಸರ್ಕಾರಿ ಶಾಲೆಗಳು ಉಳಿಯಬಹುದು. ಇಂತಹ ವಾತಾವರಣ ಸೃಷ್ಟಿಸಲು ಪೋಷಕರು ಸಹ ಕೈಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT