ADVERTISEMENT

ನಿಸ್ವಾರ್ಥ ಸೇವೆ, ಅನುಕರಣೀಯ ಪ್ರೋತ್ಸಾಹ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮಾರ್ಚ್ 2021, 19:30 IST
Last Updated 24 ಮಾರ್ಚ್ 2021, 19:30 IST

‘ಮಕ್ಕಳ ಸೆಳೆದ ರೇಖಾ ಬಾಂಡ್’ (ಪ್ರ.ವಾ., ಮಾರ್ಚ್‌ 24) ಖಂಡಿತಾ ಒಳ್ಳೆಯ ಸುದ್ದಿ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶಿಕ್ಷಕಿ ರೇಖಾ ಪ್ರಭಾಕರ್‌ ಅವರು ಸರ್ಕಾರಿ ಶಾಲೆ ಸೇರುವ ಮಕ್ಕಳಿಗೆ ಸ್ವಂತ ಹಣದಲ್ಲಿ ಒಂದು ಸಾವಿರ ರೂಪಾಯಿ ಮೌಲ್ಯದ ಬ್ಯಾಂಕ್ ಠೇವಣಿಯ ಬಾಂಡ್ ಯೋಜನೆ ಜಾರಿಗೆ ತಂದಿರುವುದು ಶ್ಲಾಘನೀಯ. ಮಕ್ಕಳ ಹೆಸರಿನಲ್ಲಿ ಹತ್ತು ವರ್ಷದ ಅವಧಿಗೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಬಾಂಡ್‌ ಅನ್ನು ಮಕ್ಕಳ ಪೋಷಕರಿಗೆ ನೀಡುವ ಮೂಲಕ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯೆ ಕಲಿಯಲು ಪ್ರೋತ್ಸಾಹ ನೀಡುತ್ತಿರುವುದು ಅನುಕರಣೀಯ.

ಅವರ ಪತಿ ಸಹ ಪತ್ನಿಯ ಕೈಂಕರ್ಯಕ್ಕೆ ಕೈಜೋಡಿಸಿರುವುದು ಮೆಚ್ಚುವಂತಹದ್ದು. ಶಾಲೆಗೆ ಮಕ್ಕಳು ಬಂದರೇನು ಬಿಟ್ಟರೇನು ಎಂದುಕೊಳ್ಳುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಕಾಲದಲ್ಲಿ ಅಪರೂಪವಾಗಿರುವ ರೇಖಾ ಅವರ ನಿಸ್ವಾರ್ಥ ಸೇವೆ ಅಭಿನಂದನಾರ್ಹ.

- ಅನುರಾಧ ಆರ್. ತಾಪ್ಸೆ,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.