ADVERTISEMENT

ವಾಚಕರ ವಾಣಿ: ಗ್ರಾಮ ಪಂಚಾಯಿತಿ: ಬಯೊಮೆಟ್ರಿಕ್ ವ್ಯವಸ್ಥೆ ಬರಲಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:49 IST
Last Updated 3 ಜನವರಿ 2021, 16:49 IST

ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದು ಇತ್ತೀಚೆಗೆ ಫಲಿತಾಂಶವೂ ಹೊರಬಿದ್ದಿರುವುದು ಸರಿಯಷ್ಟೆ. ಆದರೆ ಈ ಪಂಚಾಯಿತಿಗಳ ಬಹುತೇಕ ಸಿಬ್ಬಂದಿ ಮಾತ್ರ ಪಂಚಾಯಿತಿ ಕಚೇರಿಯನ್ನು ಬಿಟ್ಟು, ಯಾವುದೇ ಕೆಲಸವಿಲ್ಲದಿದ್ದರೂ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇರುವುದೇ ಹೆಚ್ಚು. ಇದರಿಂದ ಪಕ್ಕದ ಹಳ್ಳಿಗಳಿಂದ ಕೆಲಸ ಕಾರ್ಯಗಳಿಗೆಂದು ಕಚೇರಿಗೆ ಬರುವ ಸಾರ್ವಜನಿಕರು ಬಹಳ ಹೊತ್ತು ಕಾಯ್ದು ನಿರಾಶರಾಗಿ ಮರಳಬೇಕಾದ ಸ್ಥಿತಿ ಇದೆ.

ಇನ್ನು ಕೆಲವು ಪಂಚಾಯಿತಿಗಳ ಪಾಡಂತೂ ಹೇಳತೀರದಂತಿದೆ. ಅಧಿಕಾರಿಗಳು ಸಮಯ ಪರಿಪಾಲನೆ ಮಾಡದೆ ತಮ್ಮಿಚ್ಛೆಯಂತೆ ಬಂದು ಹೋಗುತ್ತಾರೆ. ಇದನ್ನು ನೋಡಿದರೆ, ಇದೇನು ಗ್ರಾಮ ಪಂಚಾಯಿತಿಯೋ ಅಥವಾ ಅಧಿಕಾರಿಗಳ ಅತಿಥಿ ಗೃಹವೋ ಎನಿಸುತ್ತದೆ. ಕೆಲವು ಕಡೆಗಳಲ್ಲಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಬೇಕಾದ ಅಧಿಕಾರಿಗಳು ರಾಜಕೀಯ ನಾಯಕರ ಒತ್ತಡಕ್ಕೆ ಒಳಗಾಗಿ ಜನಸಾಮಾನ್ಯರನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೆಲ್ಲ ನಿಯಂತ್ರಣಕ್ಕೆ ಬಂದು, ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೆ ಸಿಗಬೇಕಾದರೆ, ಪಂಚಾಯಿತಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸುವುದು ಸೂಕ್ತವೆನಿಸುತ್ತದೆ.

–ಶ್ರೀಧರ ಎಸ್. ವಾಣಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.