ADVERTISEMENT

ವಾಚಕರ ವಾಣಿ| ಮತ್ತೆ ಯಾವಾಗ ಬರೆ ಎಳೆಯುವುದೋ?

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 19:31 IST
Last Updated 27 ಡಿಸೆಂಬರ್ 2021, 19:31 IST

ಪಾದರಕ್ಷೆ ಮತ್ತು ಬಟ್ಟೆಗಳ ಮೇಲಿನ ಜಿಎಸ್‌ಟಿ ದರವು ಜನವರಿ 1ರಿಂದ ಶೇ 5ರಿಂದ ಶೇ 12ಕ್ಕೆ ಏರಿಕೆಯಾಗಲಿ ರುವ ವಿಷಯ ಕೇಳಿ ಆಘಾತವಾಯಿತು. ಜಿಎಸ್‌ಟಿ ದರವನ್ನು ಏಕಾಏಕಿ ಶೇ 140ರಷ್ಟು ಹೆಚ್ಚಿಸುವುದರ ಅವಶ್ಯಕತೆ ಏನು? ಈಗಾಗಲೇ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಪಾದರಕ್ಷೆ ಮತ್ತು ಬಟ್ಟೆ ಪ್ರತಿಯೊಬ್ಬರೂ ಉಪಯೋಗಿಸುವ ವಸ್ತುಗಳಾಗಿವೆ. ದೇಶದ ಶೇಕಡ 100ರಷ್ಟು ಜನ ಉಪಯೋಗಿಸುವ ವಸ್ತುಗಳ ಮೇಲೆ ಜಿಎಸ್‌ಟಿ ದರ ಏರಿಸಿ ವಸೂಲಿ ಮಾಡುವ ಯೋಜನೆಗೆ ಸರ್ಕಾರ ಮುಂದಾಗಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್‌ ದರ ಈಗಾಗಲೇ ವಿಪರೀತಕ್ಕೆ ಹೋಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇನ್ನು ಯಾವುದರ ರೂಪದಲ್ಲಿ ಜನರಿಗೆ ಮತ್ತೆ ಬರೆ ಎಳೆಯುವ ಯೋಜನೆ ರೂಪಿಸಿದೆಯೋ ಬಲ್ಲವರಾರು?

ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.