ADVERTISEMENT

ಅಮಾನವೀಯ ದ್ವೇಷ: ಕಠಿಣ ಶಿಕ್ಷೆಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST

ಹಾಸನ ಜಿಲ್ಲೆಯ ಹಳೇಬೀಡು ಸಮೀಪದ ಅಜ್ಜೇನಹಳ್ಳಿಯಲ್ಲಿ ಇತ್ತೀಚೆಗೆ ವೈಯಕ್ತಿಕ ದ್ವೇಷಕ್ಕೆ ರಾತ್ರೋರಾತ್ರಿ 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದುಹಾಕಿರುವುದು ಖಂಡನಾರ್ಹ. ಕುಟುಂಬಗಳ ನಡುವೆ ಅಥವಾ ಯಾವುದೋ ಹಳೆಯ ದ್ವೇಷಕ್ಕೆ ವ್ಯಕ್ತಿಯನ್ನು ನೇರಾನೇರ ಎದುರಿಸಲಾಗದೆ ಅಡಿಕೆ ಮರಗಳನ್ನು ತುಂಡರಿಸುವ ಅನೇಕ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ, ನಾಲ್ಕೈದು ವರ್ಷ ಕಷ್ಟಪಟ್ಟು ಮಕ್ಕಳಂತೆ ಸಾಕಿ ಬೆಳೆಸಿದ ಮರಗಳನ್ನು ಹೀಗೆ ಕಡಿದು ಹಾಕಿದರೆ, ಆ ಬಡಪಾಯಿ ರೈತನಿಗೆ ಹೇಗಾಗ ಬಹುದು ಎಂಬುದು ಊಹಿಸಲು ಅಸಾಧ್ಯ.

ರೈತರ ಬದುಕು ಮೊದಲೇ ಶೋಚನೀಯವಾಗಿದೆ. ಅದರಲ್ಲೂ ಇಂತಹ ಘಟನೆಗಳು ನಡೆದರೆ ಮೇಲೇಳಲಾ ರದಂತಹ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆಯೇ ಹೆಚ್ಚು. ದ್ವೇಷಕ್ಕಾಗಿ ಹೀಗೆ ಬೆಳೆಯನ್ನು ಕಡಿದು ಹಾಕುವ ದುಷ್ಟರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸುವ ಕಾನೂನನ್ನು ಜಾರಿಗೆ ತರಬೇಕಾಗಿದೆ. ನಷ್ಟಕ್ಕೆ ಒಳಗಾದ ರೈತರಿಗೆ ಯಾವುದಾದರೂ ಮೂಲದಿಂದ ಸರ್ಕಾರ ನಷ್ಟ ಪರಿಹಾರದ ನೆರವು ನೀಡಬೇಕಾಗಿದೆ.

- ಮುರುಗೇಶ ಡಿ.,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.