ಹಿಂದಿಯನ್ನು ಲೋಕಭಾಷೆಯಾಗಿ ಬೆಳೆಸಬೇಕಿದೆ ಎಂದು ಎಚ್.ಎಸ್.ಮಂಜುನಾಥ ಹೇಳಿದ್ದಾರೆ (ವಾ.ವಾ., ಸೆ. 14). ಯಾವ ಕಾರಣಕ್ಕಾಗಿ ಹಿಂದಿಯನ್ನು ಹಾಗೆ ಬೆಳೆಸಬೇಕಿದೆಯೋ ಅರ್ಥವಾಗಲಿಲ್ಲ! ಭಾಷೆ ಇರುವುದು ಪರಸ್ಪರ ಮಾತನಾಡಲು. ಇಂದು ನಾವು ಬ್ಯಾಂಕಿಗೆ ಹೋದರೆ ಅಲ್ಲಿ ನಮ್ಮೊಂದಿಗೆ ನಮ್ಮ ಭಾಷೆಯಲ್ಲಿ ಮಾತನಾಡುವವರೇ ಇಲ್ಲ. ಹೀಗಾಗಿ ಬಡಪಾಯಿ ಗ್ರಾಹಕರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಈ ಹಿನ್ನೆಲೆಯಲ್ಲಿ ಜನರ ಭಾಷೆಯನ್ನು ಬೆಳೆಸಬೇಕಿದೆಯೇ ಹೊರತು ಹಿಂದಿ, ಇಂಗ್ಲಿಷ್‌ನಂಥ ಅಪರಿಚಿತ ಭಾಷೆಗಳನ್ನಲ್ಲ. ಯಾವ ಭಾಷೆಯನ್ನೇ ಆಗಲಿ ಒತ್ತಾಯದಿಂದ ಬೆಳೆಸಲೂ ಆಗುವುದಿಲ್ಲ. ಅಂಥ ಪ್ರಯತ್ನಕ್ಕೆ ಸುರಿಯುವ ಹಣ ವ್ಯರ್ಥವಲ್ಲವೇ?
– ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ,ಹಗರಿಬೊಮ್ಮನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.