ADVERTISEMENT

ವಾಚಕರ ವಾಣಿ: ದೇವಾಲಯದ ಹಿಂದೆ ವಾದ್ಯ ನುಡಿಸಿದಂತೆ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:31 IST
Last Updated 9 ಜನವರಿ 2023, 19:31 IST

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕಲಾ ಪ್ರದರ್ಶನ ನೀಡಲು ಉತ್ಸುಕವಾಗಿದ್ದ, ನಾಡಿನ ನಾನಾ ಭಾಗಗಳಿಂದ ಬಂದಿದ್ದ ಕಲಾತಂಡಗಳಿಗೆ ನಿರಾಸೆ ಉಂಟಾಯಿತು. ಸಾಮಾನ್ಯವಾಗಿ ಯಾವುದೇ ಉತ್ಸವದ ಮೆರವಣಿಗೆಯಲ್ಲಿ ಉತ್ಸವಮೂರ್ತಿಯ ರಥದ ಮುಂದೆ ಕಲಾವಿದರ ಕಲಾಪ್ರದರ್ಶನ ಸಾಗುವುದು ವಾಡಿಕೆ. ಆದರೆ ಈ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಪ್ರಥಮ ಬಾರಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಹಿಂದೆ ಕಲಾತಂಡಗಳು ಬರುವಂತೆ ಮಾಡಿದ್ದು ಎಷ್ಟು ಸರಿ? ಇದರಿಂದ ಕಲಾವಿದರಿಗೆ ಸಿಗಬೇಕಾಗಿದ್ದ ಮನ್ನಣೆ ಸಿಗದಂತಾ ಯಿತು. ಈ ರೀತಿ ಮಾಡಿರುವುದು ದೇವಸ್ಥಾನದ ಹಿಂದೆ ವಾದ್ಯ ನುಡಿಸಿದಂತೆ ಅಲ್ಲವೇ?

–ಶಿವಕುಮಾರ್, ಸಾರ್ಥವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT