ADVERTISEMENT

ಆರೋಗ್ಯದ ಮಹತ್ವ ಅರಿವಾಗಲಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 20:00 IST
Last Updated 31 ಮಾರ್ಚ್ 2020, 20:00 IST

ನಮ್ಮ ಮನೆಯ ಸುತ್ತಮುತ್ತಲಿನ ನಿವಾಸಿಗಳು ಯಾರಾದರೂ ಹೊರದೇಶಕ್ಕೆ ಹೋಗಿಬಂದು ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದರೆ, ನಾವು ಜಾಗ್ರತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಅವರಲ್ಲಿ ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಡುವವರೆಗೂ ಅವರ ಮನೆಗೆ ಹೋಗದೆ ಇರುವುದೇ ಸೂಕ್ತ. ಹಾಗೆಯೇ ಮಕ್ಕಳನ್ನು ಸಹ ಕಳುಹಿಸಬಾರದು.

ಬಹಳ ಮುಖ್ಯವಾಗಿ, ಮನೆಕೆಲಸಕ್ಕೆ ಬರುವವರು ಕೊರೊನಾ ಸೋಂಕಿತರ ಮನೆಗಳಲ್ಲಿ ಅರಿವಿಲ್ಲದೆ ಕೆಲಸ ಮಾಡಿರಬಹುದು. ಆದ್ದರಿಂದ ಅವರಿಗೆ ತಿಂಗಳ ಸಂಬಳವನ್ನು ಮೊದಲೇ ನೀಡಿ ಕೆಲಸಕ್ಕೆ ಬಾರದಂತೆ ಹೇಳಬೇಕು. ನಾವು ಬೆಳಿಗ್ಗೆಯೇ ಹಾಲು, ತರಕಾರಿ, ದಿನಸಿ ಕೊಂಡು ತಂದ ನಂತರ ಮನೆಯಿಂದ ಹೊರಗೆ ಹೋಗಬಾರದು. ನಮ್ಮ ಕೆಲಸಗಳು ಇದ್ದೇ ಇರುತ್ತವೆ. ಆದರೆ ನಮ್ಮ ಆರೋಗ್ಯ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

-ಕೆ.ಎಂ.ಜಯರಾಮಯ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT