ADVERTISEMENT

ವಾಚಕರ ವಾಣಿ: ಇತಿಹಾಸ ಅರಿಯುವುದು ವಿವಾದಾತ್ಮಕವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಡಿಸೆಂಬರ್ 2021, 19:31 IST
Last Updated 2 ಡಿಸೆಂಬರ್ 2021, 19:31 IST

‘ಅವಿತಿಟ್ಟ ಅಂಬೇಡ್ಕರ್’ ಪುಸ್ತಕ ಬಿಡುಗಡೆ ಸಮಯದಲ್ಲಿ ಪ್ರಕಾಶ್ ಬೆಳವಾಡಿ ಅವರು ಆಡಿದ ಮಾತಿಗೆ ಚಂದನ್ ಎನ್ನುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ (ವಾ.ವಾ., ಡಿ. 2). ಕಾಂಗ್ರೆಸ್ ಪಕ್ಷಕ್ಕೆ ಆಗ ನಿಜವಾಗಿಯೂ ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದಿದ್ದರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಅವಕಾಶ ಇತ್ತಲ್ಲವೆ? ಅಷ್ಟಾಗಿಯೂ ಅವರ ಸಹಾಯಕನನ್ನೇ ಅವರ ವಿರುದ್ಧ ನಿಲ್ಲಿಸಿ ಸೋಲಿಸಿದ್ದರ ಹಿಂದೆ ಯಾವ ಅಜೆಂಡಾ ಇತ್ತು? ಮಹಾನಾಯಕ ಅಂಬೇಡ್ಕರ್ ಅವರನ್ನು ಬಿಟ್ಟು ಅವರ ಸಹಾಯಕನಿಗೆ ಅಷ್ಟೊಂದು ಜನ ಮತ ಹಾಕಿದ್ದಾರೆ ಎಂದರೆ ಅದರ ಹಿಂದೆ ಎಷ್ಟು ಅಪಪ್ರಚಾರ ನಡೆದಿರಬಹುದು? ಮತ ಎಣಿಕೆಯಲ್ಲಿ ಮೋಸ ಆಗಿರುವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವೇ?

ಅದೇ ರೀತಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಅನಗತ್ಯವಾಗಿ ಬಂಧಿಸಿ ಜೈಲಿನಲ್ಲಿಟ್ಟು, ಅಲ್ಲಿಂದ ಅವರನ್ನು ಜೀವಂತವಾಗಿ ಹೊರಬಾರದಂತೆ ಮಾಡಿದ ಹಿಂದೆ ಯಾರಿದ್ದಾರೆ, ಯಾವ ಕಾರಣ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಇಚ್ಛಿಸುವುದರಲ್ಲಿ ತಪ್ಪೇನಿದೆ? ಮಹಾವೀರ್ ತ್ಯಾಗಿ ಎಂಬ ಕಾಂಗ್ರೆಸ್ ಸದಸ್ಯ ‘ನೀವು ಇಂದು ರಚಿಸಿರುವ ಸಂವಿಧಾನದ ಖಂಡಗಳ ಅಡಿಯಲ್ಲಿ ನೀವೇ ಬಂಧಿತರಾಗುವ ಅವಕಾಶ ನಿಮಗೆ ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಖಂಡಿತವಾಗಿಯೂ ಸಿಗುತ್ತದೆ’ ಎಂದು ಘಂಟಾಘೋಷವಾಗಿ ಹೇಳಿದ್ದರು. ಇದನ್ನೆಲ್ಲ ಸಮಾಜ ತಿಳಿಯುವುದು ಬೇಡವೇ? ಇತಿಹಾಸದಲ್ಲಿ ಮುಚ್ಚಿಹೋದ ಅಧ್ಯಾಯಗಳನ್ನು ಹುಡುಕುವುದು ವಿವಾದ ಏಕೆ ಆಗಬೇಕು?

-ಪಟಾಪಟ್ ಶ್ರೀನಿವಾಸ್, ಅತ್ತಿಬೆಲೆ, ಆನೇಕಲ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.