ADVERTISEMENT

ವಾಚಕರ ವಾಣಿ: ರಾಜ್ಯದ ಉಗಮದ ನೆನಪಿನ ಹಬ್ಬ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST

‘ಕನ್ನಡ ರಾಜ್ಯೋತ್ಸವವೇ ಇರಲಿ’ ಎಂಬ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ವಾದಕ್ಕೆ (ವಾ.ವಾ.,ನ. 4) ನನ್ನ ಅಭ್ಯಂತರವಿದೆ. ಕನ್ನಡ ಭಾಷಿಕರೇ ಬಹುವಾಗಿರುವ ಪ್ರಾಂತ್ಯವನ್ನು ವಿಂಗಡಿಸಿ ಭಾಷಾವಾರು ಕರ್ನಾಟಕ ರಾಜ್ಯವನ್ನಾಗಿ ನಮ್ಮ ಹಿರಿಯ ನೇತಾರರು ರೂಪಿಸಿದ್ದಾರೆ. ಹಾಗಾಗಿ ‘ಕರ್ನಾಟಕ ರಾಜ್ಯೋತ್ಸವ’ವೇ ಸೂಕ್ತ. ಕನ್ನಡ ಭಾಷಿಕರ ರಾಜ್ಯದ ಉಗಮದ ನೆನಪಿನ ಹಬ್ಬ ಇದು.

ಆಡಳಿತಾತ್ಮಕವಾಗಿಯೂ ಪ್ರದೇಶವನ್ನು ‘ಕರ್ನಾಟಕ’ ಎಂಬ ಪದ ಬಿಂಬಿಸುವುದರಿಂದ ‘ಕರ್ನಾಟಕ ರಾಜ್ಯೋತ್ಸವ’ವೇ ಭಾರತದಂತಹ ಒಕ್ಕೂಟ ವ್ಯವಸ್ಥೆಯ ದೇಶಕ್ಕೆ ಸರಿಹೊಂದುತ್ತದೆ. ಆದರೆ ಬ್ಯಾರಿ, ಕೊಂಕಣಿ, ತುಳು, ಕೊಡವದಂತಹ ಭಾಷೆಗಳನ್ನಾಡುವ ಜನರೂ ಇಲ್ಲಿ ಇರುವುದರಿಂದ ‘ಕರ್ನಾಟಕ ರಾಜ್ಯೋತ್ಸವ’ ಎಂದಾಗಬೇಕು ಎನ್ನುವುದು ಸರಿಯಲ್ಲ. ಇದು ಈ ಭಾಷೆಗಳನ್ನಾಡುವ ಜನರ ರಾಜ್ಯವೂ ಹೌದಲ್ಲವೇ? ಅವರೆಲ್ಲ ನಮ್ಮ ರಾಜ್ಯದ ಸಹೋದರರು. ಆದರೂ ಅವರು ಅಲ್ಪಸಂಖ್ಯೆಯಲ್ಲಿ ಇರುವುದರಿಂದ, ಅವರ ಬಗ್ಗೆ, ಆ ಭಾಷೆಗಳ ಬಗ್ಗೆ ಅಭಿಮಾನ, ಗೌರವ ನಮ್ಮೆಲ್ಲರಿಗೂ ಇದ್ದರೂ ‘ಕರ್ನಾಟಕ ರಾಜ್ಯೋತ್ಸವ’ಕ್ಕೆ ಅದು ಸರಿಯಾದ ಕಾರಣ ಅಲ್ಲ ಮತ್ತು ಕನ್ನಡದೊಂದಿಗೆ ಹೋಲಿಕೆಯೂ ಸಲ್ಲದು. ಇದು ಭಾಷೆಯ ಹುಟ್ಟಿನ ಆಚರಣೆಯಲ್ಲ ಅಲ್ಲವೇ?

–ಅನುಪಮಾ ಆರ್., ಶಹಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.