ADVERTISEMENT

ಹೋಮ್‌ವರ್ಕ್‌ ಎಂಬ ಹೊರೆ ಬೇಡ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 16:51 IST
Last Updated 7 ಜೂನ್ 2019, 16:51 IST

ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್‌ ಕೊಡಬಾರದೆಂದು ಸರ್ಕಾರ ಸುತ್ತೋಲೆ ಹೊರಡಿಸಿರುವುದು(ಪ್ರ.ವಾ., ಜೂನ್‌ 2) ಶ್ಲಾಘನೀಯ. ಆದರೆ ಮಕ್ಕಳಿಗೆ ದಿನಕ್ಕೆ ಒಂದೆರಡು ಪುಟಗಳ ಹೋಮ್‌ವರ್ಕ್‌ ಕೊಟ್ಟರೆ ಚೆನ್ನಾಗಿರುತ್ತದೆ ಎಂದು ಎಂ.ಎಸ್.ಉಷಾಪ್ರಕಾಶ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

(ವಾ.ವಾ., ಜೂನ್‌ 6). ನನ್ನ ಶಿಕ್ಷಕ ವೃತ್ತಿಜೀವನದ 11 ವರ್ಷಗಳ ಅನುಭವದ ಪ್ರಕಾರ, ಮಕ್ಕಳಿಗೆ ಹೋಮ್‌ವರ್ಕ್‌ ಹೊರೆ ಎನಿಸುತ್ತದೆ. 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಕನ್ನಡ ಮತ್ತು ಹಿಂದಿ ಬೋಧನೆ ಮಾಡಿದ್ದೇನೆ. ಕನ್ನಡದ ಮೊದಲ ಅಕ್ಷರ ಬರೆಯಲು ಆರಂಭಿಸಿದ ಒಂದನೇ ತರಗತಿಯ ಮಕ್ಕಳು, ಅರ್ಧ ವಾರ್ಷಿಕ ಪರೀಕ್ಷೆ ಮುಗಿಸುವ ಹೊತ್ತಿಗೆ, ಕನ್ನಡದ ಸುಭಾಷಿತಗಳನ್ನು ಓದುವಷ್ಟರ ಮಟ್ಟಿಗೆ ತಯಾರಾಗಿರುತ್ತಿದ್ದರು. ಆದರೆ ಅಷ್ಟು ಜಾಣ ಮಕ್ಕಳು ಹೋಮ್‌ವರ್ಕ್ ಕೊಟ್ಟರೆ ಸಾಕು, ಮಾರನೇ ದಿನ ಶಾಲೆಗೆ ಬರುತ್ತಿರಲಿಲ್ಲ. ಸಣ್ಣ ವಯಸ್ಸಿನಲ್ಲಿ ನಲಿ– ಕಲಿ ರೀತಿಯ ಶಿಕ್ಷಣವೇ ಚೆನ್ನಾಗಿರುತ್ತದೆ. ಅಧಿಕ ಒತ್ತಡ ಸೂಕ್ತವಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರ ಸರಿ ಎನಿಸುತ್ತದೆ.

ಬಿ.ಮೊಹಿದ್ದೀನ್ ಖಾನ್‌,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.